Sunday, September 13, 2026
Homeಜಿಲ್ಲಾಸುದ್ದಿದೇಶ ಸೇವೆ ಮಾಡಿದ ಸೈನಿಕನಿಗೆ ಅವಮಾನ: ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಇಂಪ್ಯಾಕ್ಟ್ ಗೆ ತಹಶೀಲ್ದಾರ್...

ದೇಶ ಸೇವೆ ಮಾಡಿದ ಸೈನಿಕನಿಗೆ ಅವಮಾನ: ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಇಂಪ್ಯಾಕ್ಟ್ ಗೆ ತಹಶೀಲ್ದಾರ್ ಧಮ್ಕಿ

Telegram Group
Join Now

ಗಂಡನೂ ತಹಶೀಲ್ದಾರ್.. ಹೆಂಡ್ತಿನೂ ತಹಶೀಲ್ದಾರ್.. ! ಪತ್ನಿ ಕೊಪ್ಪ ತಹಶೀಲ್ದಾರ್… ಪತಿ ಶೃಂಗೇರಿ ತಹಶೀಲ್ದಾರ್..! ಪ್ರಶ್ನೆ ಮಾಡುವ ಜನಸಮಾನ್ಯರು, ಮಾಧ್ಯಮದವರ ಮೇಲೆ ದರ್ಬಾರ್.! ಕೊಪ್ಪ ತಹಶೀಲ್ದಾರ್ ಬಗ್ಗೆ ಸುದ್ದಿ ಮಾಡಿದ್ರೆ ಶೃಂಗೇರಿ ತಹಶೀಲ್ದಾರ್ ವಕಾಲತ್ತು.! ನನ್ ಹೆಂಡ್ತಿ ಬಗ್ಗೆ ಯಾಕೆ ಸುದ್ದಿ ಮಾಡಿದ್ರಿ ಅಂತಾ ಅಧಿಕ ಪ್ರಸಂಗದ ಟಾಕ್.!

ಯೆಸ್, ವಿಚಾರ ಆಗಿದಿಷ್ಟು.. ಈ ಪೋಟೋದಲ್ಲಿ ಕಾಣುವ ಈ ವ್ಯಕ್ತಿಯ ಹೆಸ್ರು ವಿಜಯ್ ಕುಮಾರ್, ಭಾರತೀಯ ಸೇನೆಯಲ್ಲಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ನಿವಾಸಿ. ಇವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ್ದಾಗ. ಸಕಾರಣವಿಲ್ಲದೇ ಕಂದಾಯ ಇಲಾಖೆ ಅಧಿಕಾರಿಗಳು ರಿಜೆಕ್ಟ್ ಮಾಡಿದ್ದಾರೆ.. ಯಾವಾಗ ಈ ವಿಚಾರ ಗೊತ್ತಾಯ್ತೋ ಆಗ, ಯಾಕೆ ಆ ನಿವೃತ್ತ ಯೋಧನಿಗೆ ಜಾತಿ ಪ್ರಮಾಣ ನೀಡಿಲ್ಲ ಅಂತಾ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಪ್ರಜಾ ಸೇವೆ ಎಂಬ ಕಾರ್ಯಕ್ರಮದಲ್ಲಿ ಪ್ರಶ್ನೆ ಮಾಡಿದ್ದಾರೆ..

ಇಷ್ಟಾಗಿಯೂ ಯಾಕೆ ಜಾತಿ ಪ್ರಮಾಣ ಪತ್ರವನ್ನ ರಿಜೆಕ್ಟ್ ಮಾಡಿದ್ದೀರಿ ಅನ್ನೋ ಪ್ರಶ್ನೆಗೆ ಕಂದಾಯ ನಿರೀಕ್ಷಕನ ಬಳಿ ಉತ್ತರವೇ ಇರಲಿಲ್ಲ.. ಆ ಸಂದರ್ಭದಲ್ಲಿ ಆಗಿರೋ ಪ್ರಮಾದವನ್ನ ಒಪ್ಪಿಕೊಂಡು, ನಮ್ಮಿಂದ ತಪ್ಪಾಗಿದೆ, ಸರಿ ಮಾಡಿಕೊಡುತ್ತೇವೆ ಅಂತಾ ಹೇಳಬೇಕಾಗಿದ್ದ ಕೊಪ್ಪ ತಹಶೀಲ್ದಾರ್ ಲಿಕಿತಾ ಅವರು ಕೂಡ ಕಂದಾಯ ನಿರೀಕ್ಷಕನ ನಡೆಯನ್ನ ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಮಧ್ಯೆ ಮಧ್ಯೆ ಮಾತಾನಾಡಲು ಹೋಗ್ತಾರೆ.. ಇದೇ ನೋಡಿ, ಶಾಸಕ ಟಿ.ಡಿ ರಾಜೇಗೌಡ ಸೇರಿದಂತೆ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನ ಕೆರಳಿಸುತ್ತೆ.. ಆಗ ನಾವು ಪ್ರಶ್ನೆ ಕೇಳಿದ್ದು ಅವರನ್ನ.. ಕಂದಾಯ ನಿರೀಕ್ಷಕನನ್ನ.. ನೀವ್ಯಾಕೆ ಮಧ್ಯೆ ಪ್ರವೇಶ ಮಾಡಿ ಅವರ ಪರ ಬ್ಯಾಟಿಂಗ್ ಮಾಡ್ತೀರಿ..? ಅಂತಾ ಕಿಡಿಕಾರಿದ್ದಾರೆ.. ಒಬ್ಬ ನಿವೃತ್ತ ಯೋಧನಿಗೆ ಈ ರೀತಿ ಅನ್ಯಾಯ ಆಗುತ್ತಿದೆ ಅನ್ನೋದನ್ನ ತಿಳಿದ ಶಾಸಕ ಟಿ.ಡಿ ರಾಜೇಗೌಡ ಕೂಡ ಅಸಾಮಾಧಾನ ವ್ಯಕ್ತಪಡಿಸಿ, ಕತ್ತೆ ಕಾಯೋಕೆ ಬರ್ತೀರಾ ಅಂತಾ ತಹಶೀಲ್ದಾರ್ ಲಿಕಿತಾ ಸೇರಿದಂತೆ ಕಂದಾಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ರು.!

ಯಾವಾಗ ಈ ಸುದ್ದಿಯನ್ನ, ಒಬ್ಬ ನಿವೃತ್ತ ಯೋಧನಿಗೆ ಆಗಿರೋ ಅನ್ಯಾಯದ ಸುದ್ದಿಯನ್ನ ಪಬ್ಲಿಕ್ ಇಂಪ್ಯಾಕ್ಟ್ ಪ್ರಸಾರ ಮಾಡುತ್ತೋ.. ಆಗ ಎಂಟ್ರಿಕೊಡ್ತಾರೆ ಮತ್ತೊಬ್ಬ ತಹಶೀಲ್ದಾರ್.. ಕೊಪ್ಪ ಪಕ್ಕದ ತಾಲೂಕಾದ ಶೃಂಗೇರಿ ತಹಶೀಲ್ದಾರ್ ಅನಪ್ ಸಾಹೇಬರು..! ಅದ್ ಹೇಗೆ ತರಾಟೆ ಅಂತಾ ನ್ಯೂಸ್ ಮಾಡಿದ್ರಿ..? ನನ್ ಹೆಂಡ್ತಿಗೆ ಅವರು ರೇಗಿದಲ್ಲ ಅಂತಾ ವಾದ ಮಾಡಿದ್ರು.. ಕೊನೆಗೆ ನಮ್ ಹತ್ರ ತಹಶೀಲ್ದಾರ್ ವಿರುದ್ಧನೇ ರೇಗಾಡಿರೋ ವೀಡಿಯೋ ಇದೆ ಸರ್ ಅಂದ್ಮೇಲೆ, ಆ ವಿಚಾರವನ್ನ ಅಲ್ಲಿಗೆ ಬಿಟ್ಟ ತಹಶೀಲ್ದಾರ್ ಸಾಹೇಬ್ರು, ಸರಿ, ಪೋಟೋ ಯಾಕೆ ಹಾಕಿದ್ರಿ..? ಪರ್ಮಿಷನ್ ತಗೊಂಡಿದ್ರಾ.. ಅಂತಾ ವಿತ್ತಂಡ ವಾದ ಮಾಡ್ತಾರೆ..

ಮಾನ್ಯ ಶೃಂಗೇರಿ ತಹಶೀಲ್ದಾರ್ ಅನೂಪ್ ಅವರೇ, ಮೊದಲು ತಾವು ಹಾಗೂ ನಿಮ್ಮ ಪತ್ನಿ ಅವರು ಸಾರ್ವಜನಿಕ ಸೇವೆಯಲ್ಲಿ ಇರೋದು ಅನ್ನೋದನ್ನ ಅರ್ಥ ಮಾಡ್ಕೊಳ್ಳಿ.. ಆ ಬಳಿಕ ಅಲ್ಲಿ ಒಬ್ಬ ಯೋಧನಿಗೆ ಆಗಿರೋ ಅನ್ಯಾಯವನ್ನ ಸರಿಪಡಿಸಿ.. ಒಬ್ಬ ಯೋಧನಿಗೆ ನೀವು ಈ ರೀತಿ ಅನ್ಯಾಯ ಮಾಡ್ತೀರಿ ಅಂದ್ರೆ ಜನಸಾಮಾನ್ಯರ ಗತಿ ಏನು..? ಅವರಿಗೆ ಯಾವ ರೀತಿ ನ್ಯಾಯ ಕೊಡಿಸ್ತೀರಿ..? ಅದೇ ಪ್ರಜಾ ಸೇವೆ ಕಾರ್ಯಕ್ರಮದಲ್ಲಿ ಸುಧೀರ್ ಕುಮಾರ್ ಮುರೊಳ್ಳಿ ಅವರೇ ಆರೋಪಿಸಿರುವಂತೆ ತಹಶೀಲ್ದಾರ್ ಲಿಖಿತಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಪೊಲೀಸರನ್ನ ಬಳಸಿಕೊಂಡು ಅಮಾಯಕರ ಮನೆಗಳಿಗೆ ನುಗ್ಗಿಸೋದು, ದಬ್ಬಾಳಿಕೆ ಮಾಡೋದು.. ಇದನ್ನೆಲ್ಲಾ ಮೊದಲು ಸರಿಪಡಿಸಿಕೊಳ್ಳಿ..

ಇನ್ನೂ ತಹಶೀಲ್ದಾರ್ ಕಡೆಯಿಂದ, ಕಂದಾಯ ಇಲಾಖೆ ಕಡೆಯಿಂದ ಆಗ್ತಿರೋ ಅನ್ಯಾಯವನ್ನ ಜನರು ಪ್ರತಿಭಟಿಸ್ತಾರೆ.. ಹಾಗಂತ ಅವರ ಮೇಲೆ ಸವಾರಿ ಮಾಡೋದನ್ನ ಮೊದಲು ಬಿಡಿ.. ಆ ಸಮಸ್ಯೆಯನ್ನ ತೋರಿಸಿದ್ರೆ, ಅಲ್ಲಿ ಯಾಕೆ ನನ್ನ ಹೆಂಡ್ತಿ ಪೋಟೋ ಹಾಕಿದ್ರಿ.. ನ್ಯೂಸ್ ಮಾಡಿದ್ರಿ ಅನ್ನೋ ಬಾಲಿಶ ಮಾತುಗಳನ್ನ ಬಿಟ್ಟುಬಿಡಿ..! ಅವರು ಸಾರ್ವಜನಿಕ ಜೀವನದಲ್ಲಿ ಇರೋದ್ರಿಂದ ಸಾರ್ವಜನಿಕರು ಸಮಸ್ಯೆ ಆದಾಗ ಕೇಳೇ ಕೇಳ್ತಾರೆ.. ಹಾಗಂತ ಕೇಳಿದವರ ಧ್ವನಿಯನ್ನ ಹತ್ತಿಕ್ಕೋದು ಯಾವ ನ್ಯಾಯ..? ನಿಮ್ಮ ಪತ್ನಿಯ ವೈಯಕ್ತಿಕ ವಿಚಾರದಲ್ಲಿ ಸಾರ್ವಜನಿಕರೋ.. ಮಾಧ್ಯಮದವರೋ ಪ್ರಶ್ನೆ ಮಾಡಿದ್ರೆ, ಖಂಡಿತಾವಾಗಿ ನೀವು ಕೇಳಿ, ನೀವೂ ಪ್ರಶ್ನೆ ಮಾಡಿ.. ಆದ್ರೆ ಅವರ ಇಲಾಖೆಯಲ್ಲಿ ನಮಗೆ ಸಮಸ್ಯೆ ಆಗ್ತಿದೆ ಅಂತಾ ಜನರು ಕೇಳಿದಾಗ, ಮಾಧ್ಯಮ ಸುದ್ದಿ ಪ್ರಸಾರ ಮಾಡಿದಾಗ, ಅಲ್ಲಿ ಮೂಗು ತೂರಿಸೋ ಕೆಲಸ ಮಾಡ್ಬೇಡಿ..! ನ್ಯೂಸ್ ತೆಗೆಯದಿದ್ರೆ, ಪೋಟೋ ತೆಗೆಯದಿದ್ರೆ ಕೇಸ್ ಹಾಕ್ತೇನೆ ಅನ್ನೋ ಧಮ್ಕಿ ಹಾಕುವ, ಬೆದರಿಸುವ ತಂತ್ರವನ್ನ ಬೇರೆಯವರ ಹತ್ತಿರ ಇಟ್ಕೊಳ್ಳಿ..! ತಹಶೀಲ್ದಾರ್ ಗೆ ತರಾಟೆ ತೆಗೆದುಕೊಂಡಾಗ ತಹಶೀಲ್ದಾರ್ ಪೋಟೋ ಅಲ್ಲದೇ ಡಿಸಿಯವರ ಪೋಟೋ ಹಾಕೋಕೆ ಆಗುತ್ತಾ..? ಈ ಸಾಮಾನ್ಯ ಜ್ಞಾನ ನಿಮಗಿರಲಿ..! ಅದನ್ನ ಬಿಟ್ಟು ಮಾಧ್ಯಮವನ್ನ ಕಂಟ್ರೋಲ್ ಮಾಡೋ ಕೆಲಸವನ್ನ ಮಾಡಬೇಡಿ..!

ಪ್ರಶಾಂತ್ ನಾರಾಯಣ್, ಪಬ್ಲಿಕ್ ಇಂಪ್ಯಾಕ್ಟ್, ಚಿಕ್ಕಮಗಳೂರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!