Wednesday, March 25, 2026
Homeಆರೋಗ್ಯ100ರಲ್ಲಿ ಸುಮಾರು 80 ಮಂದಿಗೆ ಕಾಡುತ್ತೆ ವಿಟಮಿನ್ ಡಿ3 ಸಮಸ್ಯೆ; ಈ ಲಕ್ಷಣಗಳಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ!

100ರಲ್ಲಿ ಸುಮಾರು 80 ಮಂದಿಗೆ ಕಾಡುತ್ತೆ ವಿಟಮಿನ್ ಡಿ3 ಸಮಸ್ಯೆ; ಈ ಲಕ್ಷಣಗಳಿದ್ದರೆ ಇಂದೇ ಎಚ್ಚೆತ್ತುಕೊಳ್ಳಿ!

ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ವಿಟಮಿನ್‌ಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಹಲವರಿಗೆ ವಿಟಮಿನ್ ಡಿ ಕೊರತೆಯುಂಟಾಗಿ ಸೈಲೆಂಟ್ ಆಗಿ ಕಾಡುತ್ತೆ. ಅದರಲ್ಲೂ ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಾಗುವುದರಿಂದ ಮತ್ತು ಜನರು ಮನೆಯೊಳಗೆ ಹೆಚ್ಚು ಸಮಯ ಕಳೆಯುವುದರಿಂದ ವಿಟಮಿನ್ ಡಿ ಕೊರತೆ ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಗೃಹಿಣಿಯರು, ಶಿಕ್ಷಕರು, ಐಟಿ ಉದ್ಯೋಗಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಲ್ಲಿ ಈ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ದಿನವಿಡೀ ನಾಲ್ಕು ಗೋಡೆಗಳ ಮಧ್ಯೆ ಇರುವುದು ಮತ್ತು ಸೂರ್ಯನ ಬೆಳಕಿಗೆ ಮೈ ಒಡ್ಡದಿರುವುದು ಇದಕ್ಕೆ ಪ್ರಮುಖ ಕಾರಣ.

ವಿಶೇಷವಾಗಿ ವಿಟಮಿನ್ ಡಿ3 ಲೋಪ ಉಂಟಾದಾಗ ದೇಹವು ಕೆಲವು ಎಚ್ಚರಿಕೆಯ ಲಕ್ಷಣಗಳನ್ನು ತೋರಿಸುತ್ತದೆ. ಇದನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ರಿಕೆಟ್ಸ್, ಆಸ್ಟಿಯೋಮಲೇಶಿಯಾ ಮತ್ತು ಹೈಪೋಕಾಲ್ಸೆಮಿಯಾದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಿಟಮಿನ್ ಡಿ3 ಕೊರತೆಯ ಈ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳುವ ವಿಧಾನಗಳನ್ನು ಅನುಸರಿಸಿ.

ವಿಟಮಿನ್ ಡಿ3 ಲಕ್ಷಣಗಳು

ವಿಪರೀತ ಮೈಕೈ ನೋವು
ದೇಹದಲ್ಲಿ ವಿಟಮಿನ್ ಡಿ3 ಕಡಿಮೆಯಾದಾಗ ವಿಪರೀತ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಭಾರವಾದ ವಸ್ತುಗಳನ್ನು ಎತ್ತಿದಾಗ ಅಥವಾ ಸುಸ್ತಾದಾಗ ಉಂಟಾಗುವ ನೋವು ದೀರ್ಘಕಾಲ ಕಾಡುತ್ತಿದ್ದರೆ ಅದು ಈ ವಿಟಮಿನ್ ಕೊರತೆಯ ಸಂಕೇತವಾಗಿರಬಹುದು.

ದೇಹದ ತೂಕ ಹೆಚ್ಚಾಗುವುದು
ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುವುದು ಕೂಡ ವಿಟಮಿನ್ ಡಿ3 ಕೊರತೆಯ ಒಂದು ಪ್ರಮುಖ ಲಕ್ಷಣವಾಗಿದೆ.

ವಿಪರೀತ ಕೂದಲು ಉದುರುವುದು
ಎಷ್ಟೇ ಪೌಷ್ಟಿಕ ಆಹಾರ ಸೇವಿಸಿದರೂ ಅಥವಾ ಕೂದಲಿನ ಆರೈಕೆ ಮಾಡಿದರೂ ಕೂದಲು ಉದುರುವುದು ನಿಲ್ಲದಿದ್ದರೆ, ಅದು ಸಹ ವಿಟಮಿನ್ ಡಿ3 ಲೋಪವನ್ನು ಸೂಚಿಸುತ್ತದೆ.

ನಿರಂತರ ಸುಸ್ತು ಮತ್ತು ನಿಶ್ಯಕ್ತಿ
ಯಾವುದೇ ಕೆಲಸ ಮಾಡದಿದ್ದರೂ ಸದಾ ಆಯಾಸವಾಗುವುದು, ಅತಿಯಾದ ಸುಸ್ತು ಮತ್ತು ದೈಹಿಕವಾಗಿ ನಿಶ್ಯಕ್ತಿ ಆವರಿಸುವುದು ದೇಹದಲ್ಲಿ ಈ ವಿಟಮಿನ್ ಮಟ್ಟ ಕುಸಿದಿರುವುದರ ಲಕ್ಷಣವಾಗಿದೆ.

ಮಾನಸಿಕ ಬದಲಾವಣೆಗಳು
ಯಾವಾಗಲೂ ಮೂಡಿಯಾಗಿರುವುದು (Mood swings), ಕಾರಣವಿಲ್ಲದೆ ಆತಂಕ ಅಥವಾ ಖಿನ್ನತೆಯ ಭಾವನೆ ಕಾಡುವುದು ಕೂಡ ವಿಟಮಿನ್ ಡಿ3 ಕೊರತೆಯಿಂದ ಉಂಟಾಗಬಹುದು.

ಇಂದಿನ ಕಾಲದಲ್ಲಿ ಪ್ರತಿ ನೂರು ಜನರಲ್ಲಿ ಸುಮಾರು 80 ಮಂದಿಗೆ ಈ ಸಮಸ್ಯೆ ಇದೆ ಎನ್ನಲಾಗಿದೆ. ಬಿಸಿಲಿಗೆ ಹೋಗದಿರುವುದು, ಸನ್‌ಸ್ಕ್ರೀನ್ ಅತಿಯಾದ ಬಳಕೆ ಮತ್ತು ಪೌಷ್ಟಿಕ ಆಹಾರದ ಕೊರತೆ ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಇದನ್ನು ಪತ್ತೆಹಚ್ಚಲು 25-OH ವಿಟಮಿನ್ ಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ವರದಿಯಲ್ಲಿ ಕೊರತೆ ಕಂಡುಬಂದಲ್ಲಿ ವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯಬೇಕು.

ಪರಿಹಾರೋಪಾಯಗಳು
ನೈಸರ್ಗಿಕವಾಗಿ ವಿಟಮಿನ್ ಡಿ3 ಪಡೆಯಲು ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ರ ನಡುವೆ ಕನಿಷ್ಠ 10-20 ನಿಮಿಷ ಬಿಸಿಲಿನಲ್ಲಿ ಇರಬೇಕು. ಆಹಾರದಲ್ಲಿ ಮೊಟ್ಟೆಯ ಹಳದಿ ಭಾಗ, ಮೀನು, ಅಣಬೆ, ಹಾಲು ಮತ್ತು ಮೊಸರನ್ನು ನಿಯಮಿತವಾಗಿ ಬಳಸುವುದರಿಂದ ಈ ಸಮಸ್ಯೆಯಿಂದ ದೂರವಿರಬಹುದು. ಈ ಮಾಹಿತಿಯು ಕೇವಲ ಸಾಮಾನ್ಯ ಅರಿವಿಗಾಗಿ ಮಾತ್ರವಾಗಿದ್ದು, ಯಾವುದೇ ಔಷಧಿ ತೆಗೆದುಕೊಳ್ಳುವ ಮೊದಲು ವೈದ್ಯರ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!