Tuesday, March 3, 2026
Homeರಾಜಕೀಯಬೆಂಗಳೂರು: ಜಿಬಿಎ ಉನ್ನತ ಮಟ್ಟದ ಸಮಿತಿ ಸದಸ್ಯರಾಗಿ ಟಿ.ಎ.ಶರವಣ ನೇಮಕ

ಬೆಂಗಳೂರು: ಜಿಬಿಎ ಉನ್ನತ ಮಟ್ಟದ ಸಮಿತಿ ಸದಸ್ಯರಾಗಿ ಟಿ.ಎ.ಶರವಣ ನೇಮಕ

ಬೆಂಗಳೂರು 5 ನಗರ ಪಾಲಿಕೆಗಳಲ್ಲಿ ಪಕ್ಷವನ್ನು ಬಲಪಡಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಅವರು ಟಿ.ಎ.ಶರವಣ ಸೇರಿ 7 ಜನರ ಉನ್ನತ ಮಟ್ಟದ ಸಮಿತಿ ರಚಿಸಿದ್ದಾರೆ.

ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ಚುನಾವಣೆ ಹಿನ್ನೆಲೆಯಲ್ಲಿ ಈ ಕ್ರಮ ವಹಿಸಲಾಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಸಿ.ಬಿ.ಸುರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಯುವ ಜನತಾದಳ ರಾಜ್ಯಾಧ್ಯಕ್ಷ ಶ್ರೀ ನಿಖಿಲ್ ಕುಮಾರಸ್ವಾಮಿ, ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಶ್ರೀ ಎಂ.ಕೃಷ್ಣಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ.ಶ್ರೀ ಟಿ.ಎ.ಶರವಣ,ಟಿ.ಎಸ್., ಶ್ರೀ ಜವರಾಯಿಗೌಡ,ಮಾಜಿ ಶಾಸಕ ಶ್ರೀ ಕೆ.ಎ.ತಿಪ್ಪೆಸ್ವಾಮಿ ಸದಸ್ಯರಾಗಿ ನೇಮಕವಾಗಿದ್ದಾರೆ. ಮಾಜಿ ಶಾಸಕ ಶ್ರೀ ಎಚ್.ಎಂ.ರಮೇಶ ಗೌಡ ಅವರು ಸಂಚಾಲಕರಾಗಿ ನೇಮಕಗೊಂಡಿದ್ದಾರೆ.

ಈ ಉನ್ನತ ಮಟ್ಟದ ಸಮಿತಿಯು ಜಿಪಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಸಂಘಟನೆ, ಬಲವರ್ಧನೆ ಸಂಬಂದ ಕಾಲಾನುಕಾಲಕ್ಕೆ ಸಭೆ ನಡೆಸಬೇಕು.ಪಕ್ಷವನ್ನು ಸದೃಢಗೊಳಿಸಲು ಕ್ರಮ ವಹಿಸಬೇಕು.

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಿಭಾಗಗಳ ಪಕ್ಷದ ಅಧ್ಯಕ್ಷರನ್ನು ಸಭೆಗಳಿಗೆ ಆಹ್ವಾನಿಸಬೇಕು. ಕಾಲ, ಕಾಲಕ್ಕೆ ಉನ್ನತ ಮಟ್ಟದ ಸಮಿತಿ ನಡೆಸುವ ಸಭೆಗಳ ಮಾಹಿತಿಯನ್ನು ಪಕ್ಷದ ರಾಜ್ಯಾಧ್ಯಕ್ಷರ ಗಮನಕ್ಕೆ ಕಾಲಕಾಲಕ್ಕೆ ತರಬೇಕು ಎಂದು ಸನ್ಮಾನ್ಯ ದೇವೇಗೌಡ ಅವರು ಸೂಚಿಸಿದ್ದಾರೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!