DV Sadananda Gowda; ಲೋಕಸಭೆ ಚುನಾವಣೆ ಭರಾಟೆ ಜೋರಾಗಿದೆ. ಕೆಲ ನಾಯಕರಿಗೆ ಟಿಕೆಟ್ ಸಿಕ್ಕಿರುವ ಸಂಭ್ರಮದಲ್ಲಿ ಇದ್ದರೇ, ಇನ್ನು ಹಲವು ಬಲಿಷ್ಠ ನಾಯಕರು ಟಿಕೆಟ್ಗಾಗಿ ನಾನಾ ಸರ್ಕಸ್ ಮಾಡ್ತಿದ್ದಾರೆ. ಈ ನಿಟ್ಟಿನಲ್ಲಿ ಡಿ.ವಿ. ಸದಾನಂದ ಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ನಗರದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ನಿಲುವು ಬಗ್ಗೆ ತಿಳಿಸಿದರು.

ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಸದಾನಂದ ಗೌಡ ರವರು ಕಾಂಗ್ರೆಸ್ ಸೇರಲು ಇಷ್ಟವಿಲ್ಲ ಆದ್ದರಿಂದ ಬಿಜೆಪಿ ಪಕ್ಷದಿಂದಲೇ ಮೋದಿಯನ್ನು ಗೆಲ್ಲಿಸುವ ಪ್ರೋತ್ಸಾಹ ನೀಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಡಿವಿಎಸ್, ಇಷ್ಟು ವರ್ಷ ಬಿಜೆಪಿಯಲ್ಲಿ ಇದ್ದು ಇಂದು ಲೋಕ ಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಮಾತ್ರಕ್ಕೆ ಕಾಂಗ್ರೆಸ್ ಕೈ ಹಿಡಿಯಲು ಇಷ್ಟವಿಲ್ಲ. ದೇಶಕ್ಕಾಗಿ ಮೂರನೇ ಭಾರಿ ಕೂಡ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎನ್ನುವುದು ನಮ್ಮ ಉದ್ದೇಶ ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಮುಂದಿನ ನಡೆ ಬಗ್ಗೆ ಡಿ.ವಿ.ಸದಾನಂದ ಮಹತ್ವದ ಸುದ್ದಿಗೋಷ್ಠಿ ನಡೆಸಿದ್ರು..

