Tuesday, March 10, 2026
Homeಜಿಲ್ಲಾಸುದ್ದಿಆಲೂರು-ಕಟ್ಟಾಯ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಗಣೇಶ್ ಸ್ನೇಹಜೀವಿ ಆಯ್ಕೆ!

ಆಲೂರು-ಕಟ್ಟಾಯ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಗಣೇಶ್ ಸ್ನೇಹಜೀವಿ ಆಯ್ಕೆ!

ಹಾಸನ ಜಿಲ್ಲೆಯ ಆಲೂರು-ಕಟ್ಟಾಯ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾಗಿ ಶ್ರೀ ಗಣೇಶ್ ಸ್ನೇಹಜೀವಿ ಅವರನ್ನ ಆಯ್ಕೆ ಮಾಡಲಾಗಿದೆ.

ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ, ಯುವಕರ ಕಣ್ಮಣಿ ಅಂತಾಲೇ ಹೆಸರು ಪಡೆದಿರುವ ಗಣೇಶ್ ಆಯ್ಕೆಯಿಂದ ಆ ಭಾಗದ ಕಾರ್ಯಕರ್ತರಲ್ಲಿ, ಮುಖಂಡರಲ್ಲಿ ಸಂತಸ ಹೆಚ್ಚಾಗಿದೆ.

ಇನ್ನೂ ತನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿಯುತ ಸ್ಥಾನ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೂ, ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜ್ ಅವರಿಗೂ , ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ ಅವರಿಗೂ, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದೇಶ್ ನಾಗೇಂದ್ರ ಅವರಿಗೂ , ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರಿಗೂ ಆಲೂರು-ಕಟ್ಟಾಯ ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾದ ಶ್ರೀ ಗಣೇಶ್ ಸ್ನೇಹಜೀವಿ ಅವರು ಧನ್ಯವಾದ ಅರ್ಪಿಸಿದ್ದಾರೆ..

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!