Tuesday, February 10, 2026
Homeರಾಜಕೀಯಹಿರಿಯ ನಾಗರಿಕರಿಗೆ, ವಿಶೇಷ ಚೇತನ ಮತದಾರರಿಗೆ 'ರ‍್ಯಾಪಿಡೋ' ಉಚಿತ ಪ್ರಯಾಣ..

ಹಿರಿಯ ನಾಗರಿಕರಿಗೆ, ವಿಶೇಷ ಚೇತನ ಮತದಾರರಿಗೆ ‘ರ‍್ಯಾಪಿಡೋ’ ಉಚಿತ ಪ್ರಯಾಣ..

Lokshabha Elections 2024; ರಾಜ್ಯದಲ್ಲಿ ಏಪ್ರಿಲ್ 26 ಕ್ಕೆ ಮೊದಲ ಹಂತದ ಚುನಾವಣೆ ನಡೆಯಲಿದೆ . ಲೋಕಸಭಾ ಚುನಾವಣೆಯಲ್ಲಿ ಹಿನ್ನಲೆ ಅನೇಕ ಹೋಟೆಲ್‌ಗಳಲ್ಲಿ ರಿಯಾಯಿತಿ ದರದಲ್ಲಿ ಊಟ, ತಿಂಡಿ ವಿತರಿಸಲು ಮುಂದಾಗಿವೆ. ಅದೇ ನಿಟ್ಟಿನಲ್ಲಿ ಪ್ರಯಾಣ ಅಪ್ಲಿಕೇಶನ್ ರ‍್ಯಾಪಿಡೋ ಸಂಸ್ಥೆ ಕೂಡ ಬೆಂಗಳೂರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ರ‍್ಯಾಪಿಡೋ ಸಂಸ್ಥೆ ,ಫ್ರೀ ಆಟೋ ಸೇವೆಗಳನ್ನ ನೀಡ್ತಿದೆ.

ಏಪ್ರಿಲ್ 26 ಕ್ಕೆ ವಿಶೇಷ ಚೇತನರಿಗೆ ಮತ್ತು ಹಿರಿಯ ನಾಗರೀಕರಿಗೆ ಒಂದು ದಿನದ ಫ್ರೀ ಆಟೋ ಸೇವೆಯನ್ನ ನೀಡಲಿದೆ. ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರು ತಮ್ಮ ಮನೆಯಿ೦ದ ಮತಗಟ್ಟೆ ತನಕ ಹೋಗಲು, ರ‍್ಯಾಪಿಡೋ ಆಟೋಗಳನ್ನ ಉಪಯೋಗಿಸಿಕೊಳ್ಳಬಹುದು.

ಮತದಾರರು ತಮ್ಮ ಹಕ್ಕು ಚಲಾಯಿಸಲು ಹೋಗುವವರಿಗೆ ಏ.26ರಂದು ಬೆಂಗಳೂರು, ಮೈಸೂರು ಹಾಗೂ ಮಂಗಳೂರು ನಗರದಲ್ಲಿ ಮತದಾರರಿಗೆ ರ‍್ಯಾಪಿಡೋ ಉಚಿತ ಬೈಕ್‌ ಸವಾರಿ ಒದಗಿಸುದಾಗಿ ಘೋಷಿಸಿದೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರಿಕ ಮತದಾರರಿಗೆ ಉಚಿತ ಆಟೋ ಮತ್ತು ಕ್ಯಾಬ್ ರೈಡ್‌ ಸೌಲಭ್ಯ ಸಿಗಲಿದೆ.

ಏಪ್ರಿಲ್‌ 26 ರಂದು ಮತದಾನ ಇರುವುದರಿಂದ ಮತದಾರರು ‘VOTENOW’ ಕೋಡ್ ಅನ್ನು ಬಳಸಿಕೊಂಡು ರ‍್ಯಾಪಿಡೋ ಅಪ್ಲಿಕೇಶನ್‌ನಲ್ಲಿ ಉಚಿತ ಸವಾರಿಗಳನ್ನು ಪಡೆಯಬಹುದು ಮತ್ತು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬಹುದು. ಚುನಾವಣಾ ದಿನದಂದು ಉಚಿತ ಸವಾರಿಗಳನ್ನು ಒದಗಿಸಲು 100ಕ್ಕೂ ಹೆಚ್ಚು ನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕ್ಯಾಪ್ಟನ್‌ಗಳನ್ನು ರ‍್ಯಾಪಿಡೋ ನಿಯೋಜಿಸುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!