Monday, February 9, 2026
Homeಆಧ್ಯಾತ್ಮಕಾಫಿನಾಡಿನಲ್ಲಿ ಮನೆಮಾಡಿದ ರಂಜಾನ್‌ ಸಂಭ್ರಮ

ಕಾಫಿನಾಡಿನಲ್ಲಿ ಮನೆಮಾಡಿದ ರಂಜಾನ್‌ ಸಂಭ್ರಮ

ಹಿಂದೂಗಳ ಯುಗಾದಿಹಬ್ಬ ಮುಗಿದ ಮರುದಿನವೇ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್‌ ಆಚರಿಸುತ್ತಿದ್ದಾರೆ. ಶ್ರದ್ಧಾ ಭಕ್ತಿಯ ಪ್ರತೀಕವಾದ ಈ ಹಬ್ಬವು ಸುಖ ಶಾಂತಿ ಸೌಹಾರ್ದತೆಯ ಸಂಕೇತಕ್ಕೆ ರಂಜಾನ್‌ ಸಾಕ್ಷಿಯಾಗಿದೆ.

ಹಬ್ಬದ ಪ್ರಯುಕ್ತ ಚಿಕ್ಕಮಗಳೂರಿನ ಕೆಂಪನಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ರಂಜಾನ್ ಮಾಸದ ಅಂಗವಾಗಿ ಒಂದು ತಿಂಗಳು ಶ್ರದ್ಧೆಯಿಂದ ಉಪವಾಸ ವ್ರತ(ರೋಜಾ) ಕೈಗೊಂಡ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಪ್ರಾರ್ಥನೆ ನಂತರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಬಂಧಿಕರನ್ನು ಹಿತೈಷಿಗಳನ್ನು ಮನೆಗೆ ಆಹ್ವಾನಿಸಿ, ಭೋಜನ ಉಣಬಡಿಸಿದರು.

ರಂಜಾನ್ ಉಪವಾಸದ ಮಹತ್ವ;
ರಂಜಾನ್‌ ಆಚರಣೆಗೂ ಮುನ್ನ ಈ ಮಾಸದಲ್ಲಿ ಮುಸ್ಲಿಮರು 30 ದಿನ ಉಪವಾಸ ಆಚರಿಸುವ ಜೊತೆಗೆ ದಾನ-ಧರ್ಮ, ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಇಸ್ಲಾಮಿನ ತರಾವೀಹ್, ನಮಾಜ್, ಉಪವಾಸ, ಝಕಾತ್ (ದಾನ), ಹಜ್ ಎಂಬ ಪಂಚಕರ್ಮಗಳನ್ನು ನೇರವೇರಿಸುವ ರಂಜಾನ್ ಪುಣ್ಯ ಸಂಪಾದಿಸುವ ಮಾಸವೂ ಎನಿಸಿಕೊಂಡಿದೆ.

-ಕಾವ್ಯಶ್ರೀ


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!