Friday, March 27, 2026
Homeಇತರೆಮರೆಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಬೀಡು ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ...

ಮರೆಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗೋಣಿಬೀಡು ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ.

ಮೂಡಿಗೆರೆ : ಗೋಣಿಬಿಡು ಕ್ಲಸ್ಟರ್ ಮಟ್ಟದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿಯು ಮರೆಬೈಲ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು.


ಪ್ರತಿಭಾ ಕಾರಂಜಿಯ ವೇದಿಕೆ ಕಾರ್ಯಕ್ರಮದಲ್ಲಿ ಗೋಣಿಬೀಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ದಿನೇಶ್‌ ಮಾತನಾಡಿ ಸ್ಪರ್ಧೆಗಳು ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕರಿಸುತ್ತವೆ ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಪಂದ್ಯಗಳು ಮಗುವಿನಲ್ಲಿ ಹುದುಗಿರುವ ಪತ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ವೇದಿಕೆಯಾಗಿದೆ ಎಂದರು. ಶಾಲಾ ಮುಖ್ಯ ಶಿಕ್ಷಕ ಗಂಗಾದರಪ್ಪ ಮಾತನಾಡಿ ಸರಕಾರ ಪ್ರತಿಯೊಂದು ಶಾಲೆಯಲ್ಲಿರುವ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ಪ್ರತಿಭಾ ಕಾರಂಜಿ ಹೋಬಳಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತದೆ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವು ಪ್ರತಿಭಾ ಕಾರಂಜಿ ಯಿಂದ ಬೆಳೆಯುತ್ತದೆ, ಮಕ್ಕಳಲ್ಲಿರುವ ಪ್ರತಿಭೆಗಳು ಹೊರಬರಬೇಕಾದರೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅವಶ್ಯಕ ಎಂದರು.

ಪ್ರತಿಭಾ ಕಾರಂಜಿಯ ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ ಎಸ್‌ ಡಿ ಎಂ ಸಿ ಅಧ್ಯಕ್ಷೆ ಶ್ರೀಮತಿ ಸಂಗೀತ, ಗೋಣಿಬಿಡು ಗ್ರಾಮ ಪಂಚಾಂಯ್ತಿ ಸದಸ್ಯರಾದ ಸುಪ್ರಿತಾ ನಯನ, ಪ್ರಹ್ಲಾದ್, ಆನಂದ್ ಮರೆಬೈಲ್, ಗ್ರಾಮಸ್ಥರದ ವಿಶ್ವಾಸ್‌ ಮರೆಬೈಲ್, ಯು.ಬಿ ಮಂಜಯ್ಯ ಹಾಗೂ ಎಲ್ಲ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!