Friday, March 27, 2026
Homeಇತರೆದತ್ತಾತ್ರೇಯರ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತೇ ವೆಯೇ ಹೊರತು ಗೋರಿಗಳಿಗಲ್ಲ.

ದತ್ತಾತ್ರೇಯರ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತೇ ವೆಯೇ ಹೊರತು ಗೋರಿಗಳಿಗಲ್ಲ.

ಚಿಕ್ಕಮಗಳೂರು: ದತ್ತಪೀಠ ನಮ್ಮದು. ನಾವು

ದತ್ತಾತ್ರೇಯರ ಪಾದುಕೆಗಳಿಗೆ ಪೂಜೆ ಸಲ್ಲಿಸುತ್ತೇ ವೆಯೇ ಹೊರತು ಗೋರಿಗಳಿಗಲ್ಲ. ಗೋರಿಗಳಿಗೆ ಕುಂಕುಮ ಹಚ್ಚಿದ್ದಾರೆಂದು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾಕಾರ್ಯದರ್ಶಿ ಟಿ.ರಂಗನಾಥ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೆಲವರು ಸ್ವಾರ್ಥಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಕುಂಕುಮ, ಹೂವುಗಳಿಂದ ಪೂಜೆ ಮಾಡುವುದು ದತ್ತಾತ್ರೇಯರ ಪೀಠಕ್ಕೆ, ಪಾದುಕೆಗಳಿಗೆ ಗೋರಿಗಳಿಗೆ ಪೂಜೆ ಮಾಡುವುದು ನಮ್ಮ ಧರ್ಮ ದಲ್ಲಿಲ್ಲವೆಂದು

ಸಷ್ಟಪಡಿಸಿದರು.

ಕೆಲವರು ಗೊಂದಲಗಳನ್ನು ಸೃಷ್ಟಿಸಲು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ದತ್ತಗುಹೆಯ ಒಳಗೆ ಸಿಸಿಟಿವಿ ಇದ್ದು, ಪರಿಶೀಲಿಸಬಹುದಾಗಿದೆ. ಸುಳ್ಳು ಹೇಳಿಕೆ ನೀಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ದತ್ತಾತ್ರೇಯ ಪೀಠದಲ್ಲಿ ದಾದಾಹಯಾತ್ ಖಲಂದರ್ ಪೀಠವಿದೆ ಎಂದು ಕೆಲವರು

ಹೇಳುತ್ತಾರೆ ಇದು ಸತ್ಯಕ್ಕೆ ದೂರುವಾದ ಸಂಗತಿ. ಇವರು ತಪಸ್ಸುಮಾಡಿರುವ ಜಾಗ ಇರುವುದು ಮಾಣಿಕ್ಯಾಧಾರದಲ್ಲಿ ಇಲ್ಲಿಂದ ಹೊರಟು ಶಿವನ ಸಮುದ್ರ, ತಮಿಳುನಾಡಿನ ತಿರುಚನಾಪಲ್ಲಿಗೆ ಹೋಗಿ ಅಲ್ಲಿಂದ ಮಹಾರಾಷ್ಟ್ರದ ವಾಶೀಂ ಜಿಲ್ಲೆಯ ಲವಾವಾನ ಎಂಬ ಊರಿಗೆ ಹೋಗಿ ನೆಲಸಿದ್ದಾರೆ. ಅಲ್ಲಿ ಅವರಿಗೆ 250 ಎಕರೆ ಜಮೀನು ಇರುತ್ತದೆ. ನಂತರ ಅಲ್ಲಿಂದ 20 ಕಿ.ಮೀ.ದೂರದ ಮಂಗ್ರೂಲ್‌ಪಿರ್ ಎಂಬ ಊರಿಗೆ ಹೋಗಿ ನೆಲಸಿ ನಿಧನರಾಗಿರುತ್ತಾರೆಂದು ಆರೋಪಿಸಿದರು.

ದತ್ತಗುಹೆಯ ಒಳಗೆ ಮಾಮಾಜಗ್ನಿಯ ಪೀಠವಾಗಿರದೆ ದತ್ತಾತ್ರೇಯರ ತಾಯಿ ಅನಸೂಯ ದೇವಿಯ ಪೀಠವಾಗಿರುತ್ತದೆ. ಮಾಮಾಜಗ್ನಿಯ ಸಮಾಧಿ ಮತ್ತು ಪೀಠಗಳು ಎಲ್ಲಿವೆ ಎಂಬ ದಾಖಲೆ ಗಳು ನಮ್ಮ ಬಳಿ ಇವೆ ಮುಂದಿನ ದಿನಗಳಲ್ಲಿ ಬಿಡುಗಡೆಮಾಡಲಾಗುವುದು ಎಂದು ತಿಳಿಸಿದರು. ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಯೋಗೀಶರಾಜ್ ಅರಸ್, ನಗರ ಅಧ್ಯಕ್ಷ ದಿಲೀಪ್ ಶೆಟ್ಟಿ, ಮುಖಂಡರಾದ ಶರತ್, ಶ್ಯಾಮ್ ವಿ.ಗೌಡ,

ಪ್ರಸಾದ್ ಕೋಟೆ, ಅಮಿತ್, ಸುನೀಲ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!