Wednesday, March 25, 2026
Homeಇತರೆಬಾಳೆಹೊನ್ನೂರು: ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ-ಭೀತಿ : ಬೆಳ್ಳಂ-ಬೆಳಗ್ಗೆ ಕಾಫಿ ತೋಟಕ್ಕೆ ಕಾಡಾನೆ ಲಗ್ಗೆ!

ಬಾಳೆಹೊನ್ನೂರು: ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ-ಭೀತಿ : ಬೆಳ್ಳಂ-ಬೆಳಗ್ಗೆ ಕಾಫಿ ತೋಟಕ್ಕೆ ಕಾಡಾನೆ ಲಗ್ಗೆ!

ಚಿಕ್ಕಮಗಳೂರು : ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಹಾವಳಿ-ಭೀತಿಯಿಂದ ಜನರು ಹೈರಣರಾಗಿದ್ದು ಬೆಳ್ಳಂ-ಬೆಳಗ್ಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದ ಕಾಫಿ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟಿದೆ.

ಹೌದು .. ಬಾಳೆಹೊನ್ನೂರು ಪಟ್ಟಣದ ವಿವೇಕ ನಗರದಲ್ಲಿರೋ ಕಾಫಿ ತೋಟಕ್ಕೆ ಕಾಡಾನೆ ದಾಳಿ ಮಾಡಿದ್ದು ಮನೆ ಹಿಂಭಾಗದಲ್ಲೇ ಇರುವ ಕಾಫಿ ತೋಟದಲ್ಲಿ ಕಾಡಾನೆ ರೌಂಡ್ಸ್ ಹಾಕುತ್ತಿದ್ದು ಅಲ್ಲಿನ ಸ್ಥಳೀಯರಿಗೆ ಮೈ ಜುಂ ಎನಿಸುವಂತಾಗಿದೆ.

ಕಾಫಿ ತೋಟದಲ್ಲಿ ಕಾಡಾನೆ ಬೀಡು ಬಿಟ್ಟಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಯಾರೂ ಮನೆಯಿಂದ ಹೊರಬರದೇ ಮನೆಯಲ್ಲಿಯೇ ಅವಿತುಕುಳಿತಿರುವ ಪರಿಸ್ಥಿತಿ ಬಂದೊದಗಿದೆ.

ಬಾಳೆಹೊನ್ನೂರು ಸುತ್ತಮುತ್ತ 4 ದಿನದಲ್ಲಿ 2 ಬಲಿ ಪಡೆದಿದ್ದ ಕಾಡಾನೆ ಕೂಡಲೇ ಕಾಡಾನೆಯನ್ನು ಸ್ಥಳಾಂತರಕ್ಕೆ ಮತ್ತೆ ಸ್ಥಳೀಯರು ಆಗ್ರಹ ಮಾಡಿದ್ದು ಹೀಗೆ ಮುಂದುವರೆದರೆ ಮತ್ತಷ್ಟು ಗಂಭೀರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಹಾಗೆ ಅರಣ್ಯ ಇಲಾಖೆ ಕ್ರಮಕೈಗೊಳ್ಳದಿದ್ರೆ ಹೋರಾಟದ ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!