ಚಿಕ್ಕಮಗಳೂರು: ನಗರದ ಐ ಜಿ ರಸ್ತೆಯಲ್ಲಿರುವ ಎ.ಆರ್. ಫರ್ನಿಚರ್ ಶಾಪ್ ಅಗ್ನಿ ಅವಘಡ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ
ಹೌದು .. ನೆರೆಯ ಮಹಾರಾಜ ಫರ್ನಿಚರ್ ಮಾಲೀಕನ ಮಗ ಹ್ಯಾರಿಸ್ ಮತ್ತು ಅವನಿಗೆ ಸಹಕರಿಸಿದ ಸಾದ್ ಹಾಗೂ ಯಾಕೂಬ್ ಎಂಬ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ಎಸಗಲು ಹ್ಯಾರಿಸ್ 20 ಸಾವಿರ ರೂಪಾಯಿ ಸುಪಾರಿ ನೀಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಈ ಬೆಂಕಿ ಆಕಸ್ಮಿಕವಲ್ಲ, ಬದಲಾಗಿ ವ್ಯವಹಾರದ ದ್ವೇಷದಿಂದ ನಡೆಸಿದ ಪಿತೂರಿ ಎಂಬುದು ಬೆಳಕಿಗೆ ಬಂದಿದೆ.

