ಗೋಣಿಕೊಪ್ಪ(ಕೊಡಗು) : ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಸಂಭವಿಸಿದೆ.
ಕೊಟ್ಟಂಗಡ ಪೂಣಚ್ಚ(72) ಹೆಜ್ಜೇನು ದಾಳಿಯಿಂದ ಮೃತರಾದವರು. ಮಂಗಳವಾರ ಸಂಜೆ ಕಾಲಭೈರವ ದೇವಸ್ಥಾನ ರಸ್ತೆಯಲ್ಲಿ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೆಜ್ಜೇನು ದಾಳಿ ಮಾಡಿದೆ. ತೀವ್ರವಾಗಿ ಅಸ್ವಸ್ಥರಾಗಿದ್ದ ಅವರನ್ನು ಸ್ಥಳೀಯರು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟೊತ್ತಿಗೆ ಪೂಣಚ್ಚ ಮೃತರಾಗಿದ್ದರು.