ಮಹಾರಾಷ್ಟ್ರ: ಕರ್ನಾಟಕ ಎಕ್ಸ್ ಪ್ರೆಸ್ ಡಿಕ್ಕಿಯಾಗಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ಎಂಬಲ್ಲಿ ನಡೆದಿದೆ. ಪುಷ್ಪಕ್ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ವದಂತಿ ಹಿನ್ನೆಲೆಯಲ್ಲಿ ಬೋಗಿಯಲ್ಲಿದ್ದ ಪ್ರಯಾಣಿಕರು ರೈಲಿನಿಂದ ಹೊರಗಡೆ ಹಾರಿದ್ದಾರೆ. ಈ ವೇಳೆ ಪಕ್ಕದ ರೇಲ್ವೆ ಹಳಿಯಲ್ಲಿ ಬರುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಬೆಂಗಳೂರಿನಿಂದ ದೆಹಲಿಗೆ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹೋಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಜಕ್ಕೂ ಪುಷ್ಪಕ್ ರೈಲು ಬೋಗಿಯಲ್ಲಿ ಬೆಂಕಿ ಹತ್ತಿಕೊಳ್ತೋ ಅಥವಾ ವದಂತಿಗೆ ಕಿವಿಗೊಟ್ಟು ಪ್ರಯಾಣಿಕರು ರೈಲಿನಿಂದ ಹಾರಿದ್ರಾ..? ಅನ್ನೋದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಒಂದೆಡೆ 10ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ರೆ ಇನ್ನೊಂದೆಡೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ಟಿನಲ್ಲಿ ವದಂತಿಯೋ ಅಥವಾ ನಿಜವಾಗಲೂ ಬೆಂಕಿ ಹತ್ತಿಕೊಳ್ತೋ ಗೊತ್ತಿಲ್ಲ. ಆದರೆ ಭೀಕರ ರೈಲು ದುರಂತಕ್ಕೆ ಅನೇಕ ಮಂದಿ ಪ್ರಾಣ ಕಳೆದುಕೊಂಡು, ಗಂಭೀರವಾಗಿ ಗಾಯಗೊಂಡಿರುವುದು ಮಾತ್ರ ನಿಜಕ್ಕೂ ದುರಂತ ಸರಿ

