Monday, August 17, 2026
Homeಇತರೆಮಂಗಳೂರು ಸ್ಪೆಷಲ್ ಫಿಶ್ ಕರಿ! ಈ ರೀತಿ ನೀವೊಮ್ಮೆ ಟ್ರೈ ಮಾಡಿ ನೋಡಿ

ಮಂಗಳೂರು ಸ್ಪೆಷಲ್ ಫಿಶ್ ಕರಿ! ಈ ರೀತಿ ನೀವೊಮ್ಮೆ ಟ್ರೈ ಮಾಡಿ ನೋಡಿ

Telegram Group
Join Now

ಕರಾವಳಿ ಅಡುಗೆ ಎಂದರೆ ಅಲ್ಲಿ ಮೀನಿನದ್ದೇ ರಾಜ್ಯಭಾರ! ಅದರಲ್ಲೂ ಮಂಗಳೂರು ಶೈಲಿಯ ಮೀನು ಸಾರು (Mangalorean Fish Curry) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಘಮಘಮಿಸುವ ಮಸಾಲೆ, ಹುಳಿ-ಖಾರ ಹಾಗೂ ತೆಂಗಿನ ಹಾಲಿನ ಮಿಶ್ರಣದಿಂದ ಈ ಸಾರು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಇಡೀ ವಿಶ್ವದಾದ್ಯಂತ ಫೇಮಸ್. ನೀವು ಎಲ್ಲೇ ಹೋದರೂ ‘ಮಂಗಳೂರು ಫಿಶ್ ಕರಿ’ಗೆ ಇರುವ ಕ್ರೇಜ್‌ ಬೇರೆಯೇ. ಹೋಟೆಲ್‌ನಲ್ಲಿ ಸಿಗುವ ಅದೇ ಅದ್ಭುತ ರುಚಿಯನ್ನು ನೀವು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಆ ರುಚಿಕರ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು:

  • ಮೀನು: 500 ಗ್ರಾಂ
  • ಈರುಳ್ಳಿ: 200 ಗ್ರಾಂ (ಸಣ್ಣದಾಗಿ ಹೆಚ್ಚಿದ್ದು)
  • ಹಸಿಮೆಣಸಿನಕಾಯಿ: 4
  • ತೆಂಗಿನ ಹಾಲು: 70 ಗ್ರಾಂ
  • ಹುಣಸೆಹಣ್ಣು: 25 ಗ್ರಾಂ (ಬಿಸಿ ನೀರಿನಲ್ಲಿ ನೆನೆಸಿ ರಸ ತೆಗೆದಿಡಿ)
  • ಧನಿಯಾ ಪುಡಿ: 2 ಟೇಬಲ್ ಚಮಚ
  • ಅಚ್ಚ ಖಾರದ ಪುಡಿ: 1 ಟೇಬಲ್ ಚಮಚ
  • ಅರಿಶಿನ ಪುಡಿ: 1/2 ಟೇಬಲ್ ಚಮಚ
  • ಕರಿಬೇವು: 10-15 ಎಸಳು
  • ಎಣ್ಣೆ ಹಾಗೂ ಉಪ್ಪು: ಅಗತ್ಯಕ್ಕೆ ತಕ್ಕಂತೆ

ತಯಾರಿಸುವ ವಿಧಾನ:

1. ಮೀನಿನ ಮ್ಯಾರಿನೇಷನ್: ಮೀನಿನ ತುಂಡುಗಳಿಗೆ ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿಯನ್ನು ಹಚ್ಚಿ ಕನಿಷ್ಠ 15 ನಿಮಿಷ ಪಕ್ಕಕ್ಕೆ ಇಡಿ. ಇದರಿಂದ ಮೀನು ಫ್ರೆಶ್ ಆಗಿರುತ್ತದೆ ಮತ್ತು ಸಾರಿನಲ್ಲಿ ರುಚಿ ಹೆಚ್ಚುತ್ತದೆ.

2. ಮಸಾಲೆ ತಯಾರಿಸಿ: ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಹೊಂಬಣ್ಣ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಅಚ್ಚ ಕೆಂಪು ಮೆಣಸಿನ ಪುಡಿ, ಧನಿಯಾ ಪುಡಿ ಮತ್ತು ಅರಿಶಿನ ಪುಡಿ ಸೇರಿಸಿ ಒಂದು ನಿಮಿಷ ಮಸಾಲೆಯ ಹಸಿ ವಾಸನೆ ಹೋಗುವವರೆಗೆ ಬೇಯಿಸಿ. ಈಗ ತಯಾರಿಸಿಟ್ಟ ಹುಣಸೆಹಣ್ಣಿನ ರಸ ಮತ್ತು ಮುಕ್ಕಾಲು ಕಪ್ ನೀರು ಸೇರಿಸಿ 4-5 ನಿಮಿಷ ಚೆನ್ನಾಗಿ ಕುದಿಸಿ.

3. ಮೀನು ಬೇಯಿಸುವ ಹಂತ: ಕುದಿಯುತ್ತಿರುವ ಮಸಾಲೆಗೆ ಮ್ಯಾರಿನೇಟ್ ಮಾಡಿದ ಮೀನಿನ ತುಂಡುಗಳನ್ನು ಹಾಕಿ. ಮೀನು ಹಾಕಿದ ತಕ್ಷಣ ಸೌಟಿನಿಂದ ಕಲಕಬೇಡಿ, ಇಲ್ಲದಿದ್ದರೆ ಮೀನು ಒಡೆದು ಹೋಗಬಹುದು. ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿ, ನಂತರ ನಿಧಾನವಾಗಿ ಮಗುಚಿ ಹಾಕಿ. ಸುಮಾರು 3-5 ನಿಮಿಷ ಬೇಯಿಸಿ.

4. ಅಂತಿಮ ಹಂತ: ಉರಿಯನ್ನು ಪೂರ್ತಿ ಕಡಿಮೆ ಮಾಡಿ, ಅದಕ್ಕೆ ದಪ್ಪನೆಯ ತೆಂಗಿನ ಹಾಲು ಮತ್ತು ತಾಜಾ ಕರಿಬೇವನ್ನ ಸೇರಿಸಿ. ಒಂದು ನಿಮಿಷ ಸಣ್ಣ ಉರಿಯಲ್ಲಿ ಕುದಿಸಿ ನಂತರ ಒಲೆಯಿಂದ ಕೆಳಗಿಳಿಸಿ. ಈ ಘಮಘಮಿಸುವ ಸಾರನ್ನು ಬಿಸಿಬಿಸಿ ಅನ್ನ ಅಥವಾ ನೀರು ದೋಸೆಯೊಂದಿಗೆ ಸವಿಯಿರಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments