ಮೂಡಿಗೆರೆ: ತಾಲೂಕು ಬಿಜೆಪಿ ಕಚೇರಿ ಪಂಚವಟಿಯಲ್ಲಿ ತೀವ್ರ ಮತ ಪರಿಷ್ಕರಣೆ ಬಗ್ಗೆ ಬಿಎಲ್ ಎ 2 ಕಾರ್ಯಕರ್ತರಿಗೆ ಕಾರ್ಯಗಾರ ಸಭೆ ಆಯೋಜಿಸಲಾಯಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ. ಕೆ ಪ್ರಾಣೇಶ್ ಅವರು, ಭಾರತದ ಪ್ರಜಾಪ್ರಭುತ್ವದ ಶಕ್ತಿ ಅಡಗಿರುವುದು ಮತದಾನದಿಂದ ದೇಶದ ಭವಿಷ್ಯವನ್ನು ರೂಪಿಸುವುದು ಚುನಾವಣೆಗಳು. ಇದರಲ್ಲಿ 18 ವರ್ಷ ಮೇಲ್ಪಟ್ಟವರ ಮತವನ್ನು ಸೇರ್ಪಡೆಗೊಳಿಸುವುದು ಹಾಗೂ ವಲಸೆ ಮತದಾರರನ್ನು ಹೊರಗಿಡುವುದು ಸೇರಿದಂತೆ ನ್ಯೆಜ ಮತದಾರರನ್ನು ಗುರುತಿಸಲು ಚುನಾವಣಾ ಆಯೋಗ ತೀವ್ರ ಮತ ಪರಿಕ್ಷರಣ ಪಟ್ಟಿ ತಯಾರಿಸಲು ಸಿದ್ಧತೆ ನಡೆಸುತ್ತಿದ್ದು. ಆಯೋಗದೊಂದಿಗೆ ಕೈಜೋಡಿಸಿ ನಮ್ಮ ಮತ ಬ್ಯಾಂಕನ್ನು ಭದ್ರಪಡಿಸಿಕೊಳ್ಳುವುದು ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದೆ.
ಗ್ರಾಮೀಣ ಮಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಮತ ಪರಿಷ್ಕರ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು ಸೇರ್ಪಡೆಗೊಳ್ಳುವವರನ್ನು ಖುದ್ದಾಗಿ ಪರಿಶೀಲಿಸಬೇಕು. ಎರಡೆರಡು ಕಡೆ ಮತ ಇರುವ ಮತದಾರರನ್ನು ಗುರುತಿಸಿ ರದ್ದುಪಡಿಸಲು ಸಹಕರಿಸಬೇಕು.
ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ದಕ್ಷ ಆಡಳಿತ, ಸ್ವಜನ ಪಕ್ಷಪಾತ, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುದ್ಧಿ ಕಲಿಸಲು ಮತದಾರರು ಸಿದ್ಧವಿದ್ದು ಇದಕ್ಕೆ ನಾವುಗಳು ತಯಾರಿರಬೇಕು ಎಂದು ತಿಳಿಸಿದರು.
ಸಂವಿಧಾನದಲ್ಲಿ ಮತದಾನವೇ ಶ್ರೇಷ್ಠವಾಗಿದ್ದು ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ನೈಜ ಮತದಾರರು ಮತದಾನದಿಂದ ಹೊರಗುಳಿಯಬಾರದು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ತಿಳಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜೆ.ಎಸ್ ರಘು ಅವರು ಮಾತನಾಡಿ, ಹಲವು ವರ್ಷಗಳ ಹಿಂದೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು. ಇದುವರೆಗೂ ಪರಿಷ್ಕರಣೆ ಮಾಡಿರುವುದಿಲ್ಲ. ಈ ಹಂತದಲ್ಲಿ ಅನೇಕರು ಮರಣ ಹೊಂದಿದ್ದು. ವಿಳಾಸ ಬದಲಾವಣೆ ಹಾಗೂ ವಲಸೆ ಮತದಾರರು ಸೇರ್ಪಡೆಯಾಗಿರುವ ಸಾಧ್ಯತೆ ಇರುತ್ತದೆ. ಇವುಗಳನ್ನು ಸೂಕ್ಷ್ಮವಾಗಿ ಕಾರ್ಯಕರ್ತರು ಗಮನಿಸಬೇಕು ಎಂದರು.
ಈ ಕಾರ್ಯಾಗಾರವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾಕ್ಟರ್ ನರೇಂದ್ರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗಜೇಂದ್ರ ತರುವೆ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ, ಪುಣ್ಯಪಾಲ್ ಪಂಚಾಕ್ಷರಿ ಹಾಲೂರು, ಎಂ.ಎಲ್ ಕಲ್ಲೇಶ್, ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಸುನಿಲ್ ಮಣ್ಣಿಕೆರೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಧನಿಕ್,ಗುತ್ತಿಗೆದಾರ ಲೋಕೇಶ್ ಮರ್ಕಲ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಸಂದೀಪ್ ಕೇಲ್ಲೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
