ಬೆಂಗಳೂರು: ಬಿಕಿನಿ ಬಾಲೆ ಸೋನು ಶ್ರೀನಿವಾಸ್ ಗೌಡ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಆದ್ರೆ ಈ ಬಾರಿ ಅವರು ಸುದ್ದಿಯಾಗಿರೋದು ಯಾವುದೋ ವಿಡಿಯೋ ಲೀಕ್ ಆಗಿರೋದ್ರಿಂದ ಅಲ್ಲ, ಬಿಕಿನಿಯನ್ನ ಹಾಕಿ ಬೀಚ್ ನಲ್ಲಿ ವಾಕ್ ಮಾಡಿಯೂ ಅಲ್ಲ. ಬದಲಾಗಿ ಅಕ್ರಮವಾಗಿ ಬಾಲಕಿಯನ್ನ ದತ್ತು ಪಡೆದಿರೋ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಗೌಡಳನ್ನ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೌದು, ಕಳೆದ ಕೆಲ ತಿಂಗಳಿನಿಂದ ಸೇವಂತಿ ಎಂಬ ಬಾಲಕಿಯನ್ನ ತನ್ನ ಬಳಿ ಇಟ್ಟುಕೊಂಡು ಸೋನುಗೌಡ ವಿಡಿಯೋ ಮಾಡುತ್ತಿದ್ದಳು. ಇತ್ತೀಚಿಗೆ ಸೇವಂತಿಯನ್ನ ದತ್ತು ಪಡೆದುಕೊಂಡಿದ್ದೇನೆ ಅಂತಾಲೂ ವಿಡಿಯೋದಲ್ಲಿ ಹೇಳಿಕೊಂಡಿದ್ದಳು. ಆದರೆ ದತ್ತು ಪಡೆಯಬೇಕಾದ್ರೆ ಪಾಲಿಸಬೇಕಾದ ಯಾವುದೇ ಕಾನೂನನ್ನ ಸೋನು ಪಾಲಿಸಿಲ್ಲ. ಅಂದ್ರೆ ಕಾನೂನು ರೀತಿ, ಸೇವಂತಿಯನ್ನ ದತ್ತು ಪಡೆಯದೇ ಸಾರ್ವಜನಿಕವಾಗಿ ನಾನು 8 ವರ್ಷದ ಸೇವಂತಿಯನ್ನ ದತ್ತು ಪಡೆದಿದ್ದೇನೆ ಅಂತಾ ಘೋಷಿಸಿಕೊಂಡಿದ್ದಳು. ಹೀಗಾಗಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವರು ಸೋನು ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸೋನು ಗೌಡ ಬಂಧನ, ಬಾಲಕಿ ತಂದೆ-ತಾಯಿಗೂ ನೋಟಿಸ್.!
ನಿನ್ನೆ ರಾತ್ರಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯಿಂದ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸೋನುಗೌಡರನ್ನ ಅರೆಸ್ಟ್ ಮಾಡಿದ್ದಾರೆ. ತಾನು ದತ್ತು ಪಡೆದಿದ್ದೇನೆ ಅಂತಾ ಹೇಳಿಕೊಂಡಿರೋ ವಿಡಿಯೋಗಳನ್ನ ಆಧರಿಸಿ ಸೋನುಗೌಡಳನ್ನ ಪೊಲೀಸರು ಬಂಧಿಸಿದ್ದಾರೆ. ಅತ್ತ ಬಾಲಕಿ ತಂದೆ-ತಾಯಿಗೂ ಕೂಡ ಪೊಲೀಸರು ನೋಟಿಸ್ ನೀಡಿದ್ದಾರೆ. ದತ್ತು ಪಡೆಯಬೇಕಾದ್ರೆ ನಿಮಗೆ ಹಣವೇನಾದ್ರೂ ನೀಡಿದ್ರಾ.? ಹಣದ ಆಮಿಷವನ್ನ ಒಡ್ಡಿ ಬಾಲಕಿಯನ್ನ ದತ್ತು ಪಡೆದ್ರಾ.? ದತ್ತು ಪಡೆದಿರೋದು ನಿಜನಾ ಅನ್ನೋ ಮಾಹಿತಿಯನ್ನ ಬಾಲಕಿ ಪೋಷಕರಿಂದ ಪೊಲೀಸರು ಪಡೆಯಲಿದ್ದಾರೆ.

ದತ್ತು ಪಡೆದ್ರೂ ಸಾರ್ವಜನಿಕವಾಗಿ ಹೇಳಿಕೊಳ್ಳುವಂತಿಲ್ಲ.!
ಕಾನೂನು ರೀತಿ ದತ್ತು ಪಡೆದ್ರೂ ಕೂಡ ನಾವು ದತ್ತು ಪಡೆದಿದ್ದೇವೆ ಅಂತಾ ಸಾರ್ವಜನಿಕವಾಗಿ ಹೇಳಿಕೊಳ್ಳುವಂತಿಲ್ಲ. ಆದ್ರೆ ಇಲ್ಲಿ ನಮ್ ಸೋನು ಬೇಬಿ, ಕಾನೂನು ರೀತಿಯಲ್ಲಿ ಆ ಬಾಲಕಿಯನ್ನ ದತ್ತು ಪಡೆದುಕೊಂಡಿಲ್ಲ. ಅಷ್ಟರಲ್ಲಿ ಇಡೀ ಜಗತ್ತಿಗೆ ತಾನು ಸೇವಂತಿಯನ್ನ ದತ್ತು ಪಡೆದಿದ್ದೇನೆ ಅಂತಾ ಸಾರಿ ಸಾರಿ ಪ್ರತಿಯೊಂದು ವಿಡಿಯೋದಲ್ಲಿ ಬೊಬ್ಬೆ ಹೊಡೆದಿದ್ದಾಳೆ. ಈ ರೀತಿ ಬೊಬ್ಬೆ ಹೊಡಿದಿದ್ದೇ ಸದ್ಯ ಆಕೆಯ ಬಂಧನಕ್ಕೆ ಕಾರಣವಾಗಿರೋದು.
ಸೇವಂತಿ ಇಟ್ಕೊಂಡು ವಿಡಿಯೋ ಮಾಡ್ತಿದ್ದ ಸೋನು.!
ಸೇವಂತಿಯನ್ನ ಇಟ್ಟುಕೊಂಡು ಪ್ರತಿದಿನ ವಿಡಿಯೋವನ್ನ ಸೋನುಗೌಡ ಮಾಡ್ತಿದ್ಳು.! ಶಾಪಿಂಗ್ ಗೆ ಹೋಗಿದ್ವಿ, ಹೋಟೆಲ್ ಗೆ ಊಟಕ್ಕೆ ಹೋಗಿದ್ವಿ, ಮಾಲ್ ಗೆ ಹೋಗಿದ್ವಿ.. ಹೀಗೆ ಕುತ್ರೋ, ನಿಂತ್ರೂ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗೆ ವಿಡಿಯೋ ಅಪ್ ಲೋಡ್ ಮಾಡ್ತಿದ್ಳು ಸೋನು. ಈ ಬಗ್ಗೆ ಅನೇಕರ ನೆಟ್ಟಿಗರು ಬೈದು ಕಾಮೆಂಟ್ ಹಾಕ್ತಿದ್ರು. ಆದ್ರೆ ಇದ್ಯಾವ್ದಕ್ಕೂ ಕೇರ್ ಮಾಡದ ಸೋನು, ವಿಡಿಯೋ ಮಾಡೋದನ್ನ ಮಿಸ್ ಮಾಡದೇ ಸೋಶಿಯಲ್ ಮೀಡಿಯಾಗೆ ಹಾಕ್ತಿದ್ಳು. ಯೂಟ್ಯೂಬ್, ಇನ್ ಸ್ಟಾ ಗ್ರಾಂ, ಫೇಸ್ಬುಕ್ ಎಲ್ಲಾ ಕಡೆ ಹಾಕಿ, ಒಂದಷ್ಟು ಜನರಿಂದ ತೆಗಳಿಸಿಕೊಂಡ್ರೂ ಮತ್ತೊಂದಷ್ಟು ಜನರು ಭೇಷ್. .ಭೇಷ್ ಸೋನು ಅಂತಾ ಕಾಮೆಂಟ್ ಹಾಕ್ತಿದ್ರು.

ಆ ಒಂದು ಡರ್ಟಿ ವಿಡಿಯೋದಿಂದ ಪ್ರಚಾರ ಪಡೆದುಕೊಂಡಿದ್ದ ಸೋನುಗೌಡ.!
ಅಷ್ಟಕ್ಕೂ ಈ ಸೋನುಗೌಡ ಮುನ್ನೆಲೆಗೆ ಬಂದಿದ್ದೇ ಆ ಒಂದು ಡರ್ಟಿ ವಿಡಿಯೋ ಕಾಲ್ ನಿಂದ.! ಅದೊಬ್ಬ ಹುಡುಗನ ಜೊತೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ವಿಡಿಯೋ ಕಾಲ್ ವಿಡಿಯೋ, ಲೀಕ್ ಆಗಿ ರಾತ್ರೋರಾತ್ರಿ ಸೋನುಗೌಡ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾದ್ಳು. ಯಾವ ಲೆವೆಲ್ ಗೆ ಅಂದ್ರೆ, ಸೋನು ಗೌಡ ವಿಡಿಯೋ ನೋಡಿದ್ಯಾ.? ಸಿಕ್ಕಾಪಟ್ಟೆ ಹಾಟ್.. ಎಲ್ಲಾ ಕಡೆ ಅದೇ ವೈರಲ್ ಕಣೋ ಅನ್ನೋ ರೀತಿಯಲ್ಲಿ ಅದೊಂದು ಬೆತ್ತಲೆ ವಿಡಿಯೋ ರಾಜ್ಯದಲ್ಲೇ ಸಂಚಲನ ಮೂಡಿಸುವ ರೀತಿ ಸುದ್ದಿಯಾಯ್ತು. ಬಹುತೇಕ ಯುವಕರ ಮೊಬೈಲ್ ನಲ್ಲಂತೂ ಆ ವಿಡಿಯೋ ಭದ್ರವಾಗಿ ಗ್ಯಾಲರಿ ಸೇರಿ ಬಿಡ್ತು. ಹೀಗೆ ಏನೂ ಅಲ್ಲದ ಸೋನುಗೌಡ , ರಾತ್ರೋರಾತ್ರಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಪಡ್ಡೆ ಹೈಕ್ಳಿಗೆ ಚಿರಪರಿಚಿತಳಾಗ್ಬಿಟ್ಳು..
ಬೆತ್ತಲೆ ಜಗತ್ತಿನಿಂದ ಬಿಗ್ ಬಾಸ್ ಜಗತ್ತಿಗೆ.!
ಹೌದು, ಯಾವಾಗ ಸೋನುಗೌಡ ಆ ಒಂದು ವಿಡಿಯೋ ಮೂಲಕ ಪಡ್ಡೆ ಹೈಕ್ಳ ಸೆಂಟರ್ ಆಫ್ ಅಟ್ರಾಕ್ಷನ್ ಅಂತಾ ಆದ್ಳೋ, ಆಗ ಸಹಜವಾಗಿಯೇ ನಮ್ ಬಿಗ್ ಬಾಸ್ ಕಣ್ಣು ಕೂಡ ಆಕೆಯ ಮೇಲೆ ಬಿತ್ತು. ಶೋ ಹಿಟ್ ಆಗ್ಬೇಕು ಅಂದ್ರೆ ಇಂತಹ ಮೆಟೆರಿಯಲ್ ಇರ್ಬೇಕು ಅನ್ನೋದು ಬಿಗ್ ಬಾಸ್ ಗೆ ಗೊತ್ತಿರದ ವಿಚಾರವೇನಲ್ಲ. ಹಾಗಾಗಿಯೇ ಬಿಟ್ಟುಬಿಡದೇ ದೊಡ್ಮನೆಗೆ ಸೋನು ಬೇಬಿಯನ್ನ ತಂದು ಬಿಟ್ಟೇ ಬಿಟ್ರು. ಈ ಮೂಲಕ ಬೆತ್ತಲೆ ಸೋನು, ಬಿಗ್ ಬಾಸ್ ಸೋನು ಆಗಿ ಬದಲಾಗಿಬಿಟ್ಳು.

ಬಿಗ್ ಬಾಸ್ ಸೋನು ಆದ್ಳು ಬಿಕಿನಿ ಸೋನು.!
ಅದೊಂದು ಬೆತ್ತಲೆ ವಿಡಿಯೋ.. ಬಿಗ್ ಬಾಸ್ ಖ್ಯಾತಿ.. ಮತ್ತೆ ಸೈಲೆಂಟಾಗಿದ್ದ ಸೋನು ಬಿಕಿನಿ ಮೂಲಕ ಮತ್ತೆ ಸುದ್ದಿಯಾದ್ಳು. ಹೌದು, ಬಿಗ್ ಬಾಸ್ ಹವಾ ಎಷ್ಟು ದಿನ ಇರುತ್ತೆ ಹೇಳಿ, ಒಂದು ತಿಂಗಳು, ಎರಡು ತಿಂಗಳು, ಅಬ್ಬಬ್ಬಾ ಅಂದ್ರೆ ಒಂದು ಆರ್ ತಿಂಗ್ಳು, ಹೌದು, ಬಿಗ್ ಬಾಸ್ ಸೋನು ಜನಮಾನಸದಿಂದ ಮರೆತೇ ಹೋಗಿದ್ಳು. ಹಾಗಂತ ನಮ್ ಸೋನು ಏನೂ ಪೆದ್ದುವಲ್ಲ, ತನ್ನನ್ನ ಮರೆತಿರುವ ಹುಡ್ಗರನ್ನ ಮತ್ತೆ ನನ್ನ ಕಡೆ ತಿರುಗಿ ನೋಡೋ ರೀತಿ ಮಾಡಬೇಕು ಅಂದುಕೊಂಡು ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕಿನಿ ಹಾಕೊಂಡು ಶೋ ಕೊಟ್ಳು. ನೀಲಿಸಾಗರದಲ್ಲಿ ಬಿಕಿನಿ ಬೇಬಿ ಸೋನುವನ್ನ ನೋಡಿದ ಪಡ್ಡೆ ಹೈಕ್ಳು, ಮಿಸ್ ಮಾಡದೇ ಮಿಲಿಯನ್ ಮಿಲಿಯನ್ ಗಟ್ಟಲೇ ವೀವ್ಸ್ ಕೊಟ್ಟು, ಸೋನುಳನ್ನ ಖುಷಿಪಡಿಸಿದ್ರು.
ಎಲ್ಲಾ ಮುಗಿದ್ಮೇಲೆ ಇದೀಗ ಸೇವಂತಿ ಮೂಲಕ ಸುದ್ದಿಯಾದ ಸೋನು.!
ಯೆಸ್, ಸೋಶಿಯಲ್ ಮೀಡಿಯಾ ಸ್ಟಾರ್ ಅಂತಾನೇ ಫೇಮಸ್ ಆಗಿರೋ ಸೋನು, ಇದೀಗ ಸೇವಂತಿ ಎಂಬ ಬಾಲಕಿ ಮೂಲಕ ಮತ್ತೆ ಪ್ರಚಾರಕ್ಕೆ ಬಂದಿದ್ದಾಳೆ. ಮಗುವನ್ನ ಅಕ್ರಮವಾಗಿ ದತ್ತು ಪಡ್ಕೊಂಡು, ಅದನ್ನ ಇಡೀ ಪ್ರಪಂಚಕ್ಕೆ ಗೊತ್ತಾಗೋ ರೀತಿಯಲ್ಲಿ ಬೊಬ್ಬೆ ಹೊಡ್ಕೊಂಡು ಇದೀಗ ಮತ್ತೆ ಸುದ್ದಿಯಾಗಿದ್ದಾಳೆ. ಇದು ಬೇಕು ಅಂತಾನೇ, ಸುದ್ದಿಯಾಗೋಣ ಅಂತಾ ಮಾಡಿಕೊಂಡ್ಳೋ.. ? ಅಥವಾ ಪೆದ್ದುತನದಿಂದ ಮಾಡಿಕೊಂಡ್ಳೋ ಆ ದೇವರಿಗೆ ಗೊತ್ತು.! ಆದ್ರೆ ಆಗಾಗ ತಾನು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗೋದನ್ನ, ಸೋನು ಮಿಸ್ ಮಾಡಲ್ಲ ಅನ್ನೊದಂತೂ ಸತ್ಯ.?
ಪ್ರಶಾಂತ್ ಮೂಡ್ಗೆರೆ, ಪಬ್ಲಿಕ್ ಇಂಪ್ಯಾಕ್ಟ್
