ಶಿವಮೊಗ್ಗ : ಸಾಗರ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆ ಬಳಿ ಇದ್ದ ಅಡಿಕೆ ಕದಿದ್ದ ಐವರು ಖತರ್ನಾಕ್ ಕಳ್ಳರನ್ನು ಬಂಧಿಸಿದ್ದಾರೆ. ತುಕ್‌ರಾಜ್, ಹನುಮಂತಪ್ಪ, ರಾಕೇಶ್, ಅಭಿಷೇಕ್, ಶಿವಕುಮಾರ್ ಬಂಧಿತ ಆರೋಪಿಗಳು.ಬಂಧಿತರು ಹತ್ತಕ್ಕೂ ಹೆಚ್ಚು ಕಡೆ ಲಕ್ಷಾಂತರ ರೂ ಬೆಳೆಬಾಳುವ ಒಣ ಅಡಿಕೆ ಕದ್ದಿದ್ದರು ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದ ಇವರು ರಾತ್ರೋರಾತ್ರಿ ಕ್ವಿಂಟಾಲ್‌ಗಟ್ಟಲೆ ಅಡಿಕೆ ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 8.19 ಲಕ್ಷ ರೂ. ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಸಾಗರ ಗ್ರಾಮಾಂತರ, ಆನಂದಪುರ, ಕಾರ್ಗಲ್, ಸೊರಬ ಠಾಣೆಗಳಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳಿಂದ ಕೆಂಪು ಅಡಿಕೆ, ಬಿಳಿ ಗೋಟು, ಚಾಲಿ, ಸಿಪ್ಪೆ ಗೋಟು ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಲ್ಲದೇ 50 ಸಾವಿರ ರೂ. ನಗದು, ಟಾಟಾ ಏಸ್, ಮಹೇಂದ್ರ ಪಿಕ್ ಅಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಳ್ಳರನ್ನ ಬಂಧಿಸಿದ ಸಾಗರ ಪೊಲೀಸರ ತಂಡವನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಪ್ರಶಂಸಿಸಿದ್ದಾರೆ.
