ವಾಹನ ತಗುಲಿ ಗಾಯಗೊಂಡಿದ್ದ ನಾಗರಹಾವನ್ನು ಉರಗ ಪ್ರೇಮಿ ಆರೀಪ್ ಅವರು ರಕ್ಷಿಸಿ ಆರೈಕೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ..
ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ರಸ್ತೆ ದಾಟುತ್ತಿದ್ದ ಹಾವಿಗೆ ವಾಹನ ತಗುಲಿ ಗಾಯವಾಗಿದ್ದು
ಗಾಯಗೊಂಡ ಹಾವನ್ನು ರಕ್ಷಿಸಿ ಬಣಕಲ್ ನ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಪಶು ವೈದ್ಯಾಧಿಕಾರಿ ಡಾ.ಪೂಜಾ ಅವರು ಹಾವಿಗೆ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆ ನೀಡಿದ ನಂತರ ಹಾವನ್ನು ಚಾರ್ಮಾಡಿ ಘಾಟ್ ಅರಣ್ಯಕ್ಕೆ ಬಿಟ್ಟಿದ್ದಾರೆ

