ಚಿಕ್ಕಮಗಳೂರು: ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗನ್ನು ಖಂಡಿಸಿ ಕಾನೂನು ಕ್ರಮಕ್ಕಾಗಿ ಜಿಲ್ಲಾ ಒಕ್ಕಲಿಗರ ಸಂಘದಿಂದ ಮನವಿ ಮಾಡಿಕೊಳ್ಳಲಾಯಿತು.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತ ಸಂವಿಧಾನವು ಹಲವು ಧರ್ಮ ಹಲವು ಜಾತಿ ಹಲವು ಭಾಷೆಗಳನ್ನು ಹೊಂದಿರುವ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಅಂಶದೊಂದಿಗೆ ಸಮಾ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಕೆಲವು ಕಾಯ್ದೆಗಳನ್ನು ಅನುಷ್ಠಾನಗೊಳಿಸಿದ್ದು ಸಮುದಾಯಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಸಂವಿಧಾನ ಅನುಚ್ಛೇದ 17ರಲ್ಲಿ ಅಸ್ಪೃಶ್ಯತೆ ಆಚರಣೆ ಮತ್ತು ಅನುಸೂಚಿತ ಬುಡಕಟ್ಟುಗಳ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿದ್ದು ಸಾಮರಸ್ಯ ಜೀವನ ನಡೆಸಲು ಸಹಕಾರಿಯಾಗಿದೆ
ಇಂತ ಕಾಯ್ದೆಗಳ ಜಾರಿಗಾಗಿ 1980ರ ದಶಕದಲ್ಲಿ ಸ್ಥಾಪನೆಗೊಂಡ ದಲಿತ ಸಂಘರ್ಷ ಸಮಿತಿಗಳು ಸರ್ಕಾರದ ಗಮನ ಸೆಳೆದು ಶಿಕ್ಷಣ ಆರೋಗ್ಯ ಭೂಮಿ ಇಂತ ವಿಚಾರಗಳಲ್ಲಿ ವಿಶೇಷವಾದ ಕಾಳಜಿಯನ್ನು ವಹಿಸಿ ನೋಂದಂತಹ ಎಲ್ಲಾ ಜನಾಂಗಗಳಿಗೂ ನ್ಯಾಯವನ್ನು ಕೊಡಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿಕೊಂಡು ಬಂದಿರುವ ವಿಚಾರ ತಮಗೆಲ್ಲರಿಗೂ ತಿಳಿದಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಂಘದಿಂದ ಸುದ್ದಿಗೋಷ್ಠಿ ನಡೆಸಿತು.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ದಲಿತಪರ ಸಂಘಟನೆಗಳು ಸದುದ್ದೇಶದಿಂದ ಜಾರಿಯದ ಅಟ್ರಾಸಿಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಂತಹ ಯಾವುದೇ ದೌರ್ಜನ್ಯ ಘಟನೆಗಳು ನಡೆಯದಿದ್ದರೂ ಸುಳ್ಳು ಪ್ರಕರಣಗಳು ದಾಖಲಿಸುವುದು ಮತ್ತು ಪೊಲೀಸ್ ಇಲಾಖೆಗೆ ಸಂಘಟನೆಯ ಹೆಸರುಗಳನ್ನು ಬಳಸಿಕೊಂಡು ಒತ್ತಡ ಏರುವುದು ಸರ್ಕಾರಿ ನೌಕರರ ಅಟ್ರಾಸಿಟಿ ಪ್ರಕರಣವನ್ನು ದಾಖಲಿಸುತ್ತಿವೆ ಎಂದು ಬೆದರಿಸುತ್ತಿರುವುದು ಮತ್ತು ಸುಳ್ಳು ಪ್ರಕರಣವನ್ನು ದಾಖಲಿಸುವಂತೆ ಪ್ರಚೋದಿಸುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪದೇಪದೇ ನಡೆಯುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಮುರಾರ್ಜಿ ಶಾಲೆಯಲ್ಲಿ ಆದಂತಹ ಘಟನೆಗಳೇ ಉದಾಹರಣೆಯಾಗುತ್ತದೆ
ಈ ಜಿಲ್ಲೆಯ ಎಲ್ಲಾ ಜನಾಂಗದ ಬಡ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಉದ್ದೇಶದಿಂದ ಮುರಾರ್ಜಿ ಶಾಲೆಯಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ ಆದರೆ ಕೆಲವು ದಲಿತ ಸಂಘಟನೆಗಳ ವೈಯಕ್ತಿಕ ಹಿತ ಸಕ್ತಿಗೋಸ್ಕರ ಅಲ್ಲಿನ ವಿದ್ಯಾರ್ಥಿ ನಿಲಯದ ವಾತಾವರಣವನ್ನು ಕಲುಷಿತಗೊಳಿಸುತ್ತಾರೆ ಇಂಥ ಘಟನೆಗಳಿಂದ ಪೋಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತದೆ
ಆಗಸ್ಟ್ 13ರಂದು ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಕ್ರೈಂ ನಂಬರ್ 53 ಇಂಥ ಅಟ್ರಾಸಿಟಿ ಕಾಯ್ದೆ ಪ್ರಕರಣ ದಾಖಲಾಗುವುದು ದಾಖಲಾಗಲು ಕೆಲವು ದಲಿತ ಸಂಘಟನೆಗಳ ಪ್ರಚೋದನೆ ಕಾರಣವಾಗಿದ್ದು ಇಂತಹ ಘಟನೆಗಳಿಂದ ಸಮುದಾಯಗಳಲ್ಲಿ ಅಶಾಂತಿ ಉಂಟಾಗುವುದರ ಜೊತೆಗೆ ದೇಶ ಭಾವನೆ ಮೂಡುತ್ತದೆ ಆದ ಕಾರಣ ಜಿಲ್ಲೆಯಲ್ಲಿ ಎಲ್ಲರೂ ಬ್ರಾತೃತ್ವ ಭಾವನೆಯನ್ನು ಮೂಡಿಸಲು ಸಮಾ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮುಂದೆಯಿಂದ ಸುಳ್ಳು ಪ್ರಕರಣ ದಾಖಲು ಮಾಡಿದಂತೆ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಒಕ್ಕಲಿಗರ ಸಂಘದಿಂದ ಮನವಿ ಮಾಡಲಾಗುತ್ತಿದೆ.
