ಸಾಹಸಸಿಂಹ, ಕರ್ನಾಟಕ ರತ್ನ ಡಾ.ವಿಷ್ಣುವರ್ಧನ್ ಅವರ 75ನೇ ಜನ್ಮದಿನದ (ಸೆ.18) ಹಿನ್ನೆಲೆ ಅಭಿಮಾನ್ ಸ್ಟುಡಿಯೋ ಬಳಿ 2 ಎಕರೆ ಖಾಸಗಿ ಜಾಗದಲ್ಲಿ ಬರ್ತ್‌ಡೇಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಭಿಮಾನ್ ಸ್ಟುಡಿಯೋಗೆ ಪ್ರವೇಶ ನೀಡದ ಹಿನ್ನೆಲೆ ಪರ್ಯಾಯ ಜಾಗದಲ್ಲಿ ವಿಷ್ಣು ಜನ್ಮದಿನಾಚರಣೆಗೆ ವ್ಯವಸ್ಥೆ ಮಾಡಲಾಗಿದೆ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬರ್ತ್‌ಡೇ ಸೆಲಬ್ರೇಷನ್‌ಗೆ ಸಿದ್ಧತೆ ನಡೆದಿದೆ.
ವಿಷ್ಣುವರ್ಧನ್ ಅವರು ‘ನಾಗರಹಾವು’ ಸಿನಿಮಾ ಮೂಲಕ ಫೇಮಸ್ ಆದವರು. ಅವರು ಜನಿಸಿದ್ದು 1950ರಲ್ಲಿ. ಅವರು ಇಂದು ಬದುಕಿದ್ದರೆ 75ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ನಮ್ಮನ್ನು ಅಗಲಿ ಹಲವು ವರ್ಷಗಳು ಕಳೆದಿವೆ. ಈ ಬಾರಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಿಂದ ಅಭಿಮಾನಿಗಳ ಪಾಲಿಗೆ ಈ ಬರ್ತ್‌ಡೇ ವಿಶೇಷ. ಆದರೆ, ಅವರ ಸಮಾಧಿ ಇರೋ ಅಭಿನವ ಸ್ಟುಡಿಯೋಗೆ ಹೋಗಲು ಅವಕಾಶ ಇಲ್ಲ ಎಂಬುದು ಫ್ಯಾನ್ಸ್ ಪಾಲಿಗೆ ಬೇಸರ ಸಂಗತಿ. ಆದರೆ, ಕೆಂಗೇರಿ ಬಳಿ ಹೊಸ ಸ್ಮಾರಕ ನಿರ್ಮಾಣ ಆಗಲಿದ್ದು, ಅದರ ನೀಲನಕ್ಷೆ ಸಿದ್ಧವಾಗಲಿದೆ.
ಮಂಟಪ ತಯಾರಿಸಿ ಪೂಜೆ ಮಾಡಿ ಅಮೃತ ಮಹೋತ್ಸವ ಆಚರಿಸಲು ಅಭಿಮಾನಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ದಾದಾ ಹುಟ್ಟುಹಬ್ಬದ ಪ್ರಯುಕ್ತ ಅನ್ನದಾನ, ರಕ್ತದಾನ ಸಮಾಜಮುಖಿ ಕಾರ್ಯಗಳು ನಡೆಯಲಿವೆ.
ರಾಜ್ಯದ ವಿವಿಧ ಮೂಲೆಗಳಿಂದ ಅಭಿಮಾನಿಗಳು ಆಗಮಿಸಲಿದ್ದು, ಮೈಸೂರಿನ ಸ್ಮಾರಕದಲ್ಲಿ ವಿಷ್ಣುವರ್ಧನ್ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಕುಟುಂಬಸ್ಥರು ಮೈಸೂರಿಗೆ ತೆರಳಿ ಪೂಜೆ ಸಲ್ಲಿಸಿ ಅಮೃತ ಮಹೋತ್ಸವ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ.
