ಸಕಲೇಶಪುರ: ಬೆಂಗಳೂರು ಮಂಗಳೂರಿನ ಜನರ ಬಹು ದಿನದ ಕನಸಾಗಿದ್ದ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ನಡೆಸಿದೆ.ಶಿರಾಡಿಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆದಿದ್ದು ಈ ಭಾಗದ ಜನರ ಬಹುದಿನಗಳ ಕನಸು ನನಸಾಗುತ್ತಿದೆ.

ಬೆಂಗಳೂರು ಮಂಗಳೂರು ಮಾರ್ಗದ ವಂದೇ ಭಾರತ್ ರೈಲು ಸಕಲೇಶಪುರಕ್ಕೆ ಆಗಮಿಸಿತ್ತು.ಈ ಸಮಯದಲ್ಲಿ ಸ್ಥಳೀಯ ಶಾಸಕ ಸಿಮೆಂಟ್ ಮಂಜು, ಹಾಗೂ ರೈಲ್ವೇ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಸ್ಥಳೀಯರು ಕೂಡ ವಂದೇ ಭಾರತ್ ರೈಲನ್ನ ಸ್ವಾ ಗತಿಸಿದ್ರು. ಇದು 20 ಬೋಗಿಗಳನ್ನ ಹೊಂದಿದ್ದು,1080 ಪ್ರಯಾಣಿಕರಿಗೆ ಪ್ರಯಾಣಿಸಬಹುದಾಗಿದೆ.ಅತ್ಯಾಧುನಿಕ ಸೌಲಭ್ಯವಿದ್ದು ವೇಗದ,ಆರಾಮದಾಯಕ ವಿಮಾನ ಪ್ರ ಯಾಣದ ಅನುಭವ ಆಗಲಿದೆ.ಈ ಭಾಗಕ್ಕೆ ವಂದೇ ಭಾರತ್ ರೈಲು ಸಂಚರಿಸಬೇಕು ಅಂತ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಸಿಮೆಂಟ್ ಮಂಜು ಭೇಟಿ ಮಾಡಿ ಹಲವು ಸಲ ಮನವಿ ಮಾಡಿದ್ರು.ಸಿಲಿಕಾನ್ ಸಿಟಿ ಬೆಂಗ್ಳೂರು ಹಾಗೂ ಕರಾವಳಿ ಭಾಗದಲ್ಲಿ ಶೀಘ್ರದಲ್ಲೇ ವಂದೇ ಭಾರತ್ ರೈಲು ಸಾರ್ವಜನಿಕರ ಸೇವೆಗೆ ಲಭ್ಯ ಆಗಲಿದೆ.
ಕೊನೆಗೂ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರ ಶ್ರಮಕ್ಕೆ ಫಲ ಸಿಕ್ಕಿದೆ. ಒಟ್ಟಿನಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಸಕಲೇಶಪುರದ ಭಾಗದ ಜನರ ಸಂತಸ ಮೂಡಿಸಿದೆ.
