ಮೂಡಿಗೆರೆ: ಹಿಂದುತ್ವ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಬಜರಂಗದಳ ಹಾಗೂ ಹಿಂದೂ ಪರ ಸಂಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡುವ ಮೂಲಕ ಮುಸಲ್ಮಾನ್ ರನ್ನು ಓಲೈಸುವ ನಿಟ್ಟಿನಲ್ಲಿ ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡುವ ದುಸ್ಸಾಹಸಕ್ಕೆ ಮುಂದಾಗಬಾರದು’ ಎಂದು ಜಿಲ್ಲಾ ಗೋ ರಕ್ಷಾ ಪ್ರಮುಖ್ ಅಜಿತ್ ಗೌಡ ಮೂಡಿಗೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಪ್ರತಿಕ್ರಿಯಿಸಿದ ಅವರು ಹಿಂದೂ ಧರ್ಮಕ್ಕೆ ರಾಜ್ಯದ ಕಾಂಗ್ರೇಸ್ ಸರ್ಕಾರ ಹಿಂದೂ ಧರ್ಮದ ಹಬ್ಬಗಳಲ್ಲಿ ಸುಖಸುಮ್ಮನೆ ಕೆಲವು ನಿರ್ಬಂಧ ಹೊರಡಿಸಿ ಧರ್ಮ ಒಡೆಯುವ ಹುನ್ನಾರ ನಡೆಸುತ್ತಿದ್ದೂ ಇದು ಹಾಸ್ಯಸ್ಪದ ಎಂದರು..
ಹಿಂದೂ ರಾಷ್ಟ್ರವನ್ನು ಒಡೆಯಲು ಹಗಲು ಕನಸು ಕಾಣುತ್ತಿದ್ದೂ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕೆಲವು ಜಿಲ್ಲೆಗಳಲ್ಲಿ ಡಿಜೆ ಬ್ಯಾನ್ ಮಾಡಿಸಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರು, ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ದಲಿತನ ಮನೆ, ಪೊಲೀಸ್ ಠಾಣೆಗೆ ಬೆಂಕಿ ಇಟ್ಟವರು ಯಾರು ಎಂಬುದನ್ನು ಕೂಡ ಲೋಕಸಭೆಯಲ್ಲಿ ಹೇಳುವ ಧೈರ್ಯ ರಾಹುಲ್ ಗಾಂಧಿಗೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮಕ್ಕೆ ಹಿಂಸೆಯ ಬಣ್ಣ ಬಳಿಯುವ ಮೂಲಕ ಸನಾತನ ಹಿಂದೂ ಧರ್ಮಕ್ಕೆ ರಾಜ್ಯದ ಕಾಂಗ್ರೆಸ್ ಅಪಮಾನ ಮಾಡಿದ್ದಾರೆ. ಅನೇಕ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ಬಳಸಿಕೊಂಡು ಸುಳ್ಳು ಕೇಸ್ ದಾಖಲಿಸಿ ಕಾರ್ಯಕರ್ತರನ್ನು ಮೌನವಾಗಿಸುವ ಪ್ರಯತ್ನದಲ್ಲಿದ್ದು.. ಇಂತಹ ಸಾವಿರಾರು ಕೇಸ್ ಜಡಿದರು ಕಾರ್ಯಕರ್ತರು ಧರ್ಮ ರಕ್ಷಣೆಗೆ ಭಯ ಪಡುವುದಿಲ್ಲ ಎಂದರು.
ಹಿಂದೂ ಕಾರ್ಯಕರ್ತರನ್ನು ಹಿಂಸೆ ಮಾಡುವವರು ಎನ್ನುವ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ತಿದ್ದಾರೆ ತಾವೇ ಹೇಳಿಕೊಳ್ಳುವ ಶಾಂತಿ ಪ್ರೀಯರು ಮಾಡುವಂತ ಕಳ್ಳ ಗೋ ಸಾಗಟ. ಲವ್ ಜಿಹಾದ್, ಮುಂತಾದ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲಿ ಎಂದರು.
ವರದಿ : ಪುನೀತ್ ಕಡಿದಾಳ್
9483811948
