ಶೃಂಗೇರಿ: ಕಾಫಿನಾಡು ಮಲೆನಾಡು ಭಾಗದಲ್ಲಿ ಈ ಬಾರೀ ಹೆಚ್ಚು ಮಳೆಯಾಗಿದ್ದು ಅದರಲ್ಲೂ ಶೃಂಗೇರಿ ಭಾಗದಲ್ಲಿ ಅಂತೂ ವಾಡಿಕೆಗಿಂತ ಹೆಚ್ಚು ಮಳೆಯಾದ ಕಾರಣ ಅಡಿಕೆಗೆ ರೋಗ ಕಾಣಿಸಿಕೊಂಡಿದ್ದು ಮೂರು ಬಾರಿ ಬೋರ್ಡೋ ಸಿಂಪಡಿಸಿದರೂ ಆದರೂ ಮತ್ತೆ ಮಳೆ ಹೆಚ್ಚಾಗುವ ಭೀತಿಯಿಂದ ಮತ್ತೆ ಬೋರ್ಡೋ ಸಿಂಪಡಿಸಬೇಕೆನ್ನುವ ಆತಂಕದಲ್ಲಿದ್ದಾರೆ.
ಹೌದು .. ಮಳೆಗಾಲ ಮುಗಿಯುವಾಗ ಮಲೆನಾಡಿನಲ್ಲಿ ಮತ್ತೆ ವಿರೀತ ಮಳೆಯಾದ ಕಾರಣ ಶೇ.80ರಷ್ಟು ತೋಟಗಳಿಗೆ ಕೊಳೆರೋಗ ಕಾಣಿಸಿಕೊಂಡಿದೆ. ಪರ್ಯಾಯ ಬೆಳೆಯಾಗಿ ಬೆಳೆಸಿದ ಕಾಫಿ , ತೆಂಗು, ಮೆಣಸುವಿಗೂ ತೊಂದರೆ ಉಂಟಾಗಿದ್ದು ಕಾಫಿ ಅಂತೂ ಗಿಡದಲ್ಲಿ ಇರದೇ ನೆಲಕ್ಕೆ ಉದುರಿ ಹೋಗಿ ಬಿಟ್ಟಿದೆ.
ಶೃಂಗೇರಿ ತಾಲೂಕಿನಲ್ಲಿ ಶೇ.75ರಷ್ಟು ಭಾಗ ಮಳೆಯಿಂದಾಗಿ ಕಾಫಿ ಅಡಿಕೆ ಪೂರ್ತಿಯಾಗಿ ಹಾಳಾಗಿದ್ದು ಮುಂದಿನ ಜೀವನ ಹೇಗೆ ನಡೆಸುವುದು ಎಂಬ ಆತಂಕದಲ್ಲೇ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
