Wednesday, May 13, 2026
Homeಕ್ರೈಮ್ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ: ಕಾಫಿ, ಊಟಕ್ಕೆ ಗಂಟೆಗಟ್ಟಲೆ ಕ್ಯೂ ನಿಂತು ಕಾಯುವ ಸ್ಥಿತಿ!

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆ: ಕಾಫಿ, ಊಟಕ್ಕೆ ಗಂಟೆಗಟ್ಟಲೆ ಕ್ಯೂ ನಿಂತು ಕಾಯುವ ಸ್ಥಿತಿ!

ಚಿಕ್ಕಮಗಳೂರು:ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಅವ್ಯವಸ್ಥೆಯ ವಿರುದ್ಧ ಮತ್ತೊಮ್ಮೆ ಗಂಭೀರ ಆರೋಪ ಕೇಳಿ ಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಹಾಗೆ ಅದು ಹೆಸರಿಗೆ ಮಾತ್ರ ಜಿಲ್ಲಾಸ್ಪತ್ರೆ, ಆದ್ರೆ ಇಲ್ಲಿ ಹೇಳಿಕೊಳ್ಳುವಂತಹ ಸೌಲಭ್ಯಗಳಿಲ್ಲ ಎಂದು ರೋಗಿಗಳು ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಹೌದು .. ಈ ಕುರಿತು ವಿಡಿಯೋ ಮಾಡಿ ಮಾತನಾಡಿರುವ ಅವರು ಜಿಲ್ಲಾಸ್ಪತ್ರೆಯ ಅವ್ಯವಸ್ಥೆಯ ವಿರುದ್ಧ ರೋಗಿಗಳು ಗರಂ ಆಗಿದ್ದು ಕಾಫಿ‌, ತಿಂಡಿ ,ಊಟಕ್ಕೆ ನಿಲ್ಲಬೇಕು ಅಂದ್ರೆ ಕ್ಯೂ ನಿಲ್ಲಬೇಕು. ವಾರ್ಡ್ ಗಳಿಗೆ ತೆರಳಿ ರೋಗಿಗಳಿಗೆ ಊಟ ,ಕಾಫಿ ನೀಡದ ಸಿಬ್ಬಂದಿಗಳು ಆಸ್ಪತ್ರೆಯ ಮುಂಭಾಗ ಕಾಫಿ, ಊಟಕ್ಕೆ ಗಂಟೆಗಟ್ಟಲೆ ಕ್ಯೂ ನಿಂತು ಕಾಯುವ ಸ್ಥಿತಿ ಎಂದು ಬಂದೋದಗಿದೆ ಎಂದು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತಿಳಿಸಿದ್ದಾರೆ.

ಹಾಗೆ ರೋಗಿಗಳ ವಾರ್ಡ್ ಗೆ ತೆರಳದೆ ಒಂದೇ ಸ್ಥಳದಲ್ಲಿ ಊಟ ,ಕಾಫಿ ವಿತರಣೆ ಒಳ ರೋಗಿಗಳ ವಿಭಾಗದಲ್ಲಿ ದಾಖಲಾದ ರೋಗಿಗಳಿಗೆ ನೀಡುವ ಮಧ್ಯಾಹ್ನ, ರಾತ್ರಿ ಊಟ , ಬೆಳಗ್ಗೆ ,ಸಂಜೆ ಕಾಫಿ . ಚಿಕಿತ್ಸೆ ಪಡೆಯುವ ರೋಗಿಗಳು ಕ್ಯೂ ನಿಂತು ಗಂಟೆಗಟ್ಟಲೆ ಕಾದು ಊಟ ,ಕಾಫಿ ಪಡೆಯುವ ಸ್ಥಿತಿ ಎಂದು ರೋಗಿಗಳು ಅಸಮಾಧಾನ ವ್ಯಕ್ತಪಿಸಿದರು.

ಈ ಕುರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತ್ತು ಸರ್ಕಾರ ಗಮನಹರಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!