Wednesday, February 11, 2026
Homeಜಿಲ್ಲಾಸುದ್ದಿಶೃಂಗೇರಿ: ರೋಟರಿ ಕ್ಲಬ್‌ ವತಿಯಿಂದ ನೆಮ್ಮಾರು ಶಾಲೆಯಲ್ಲಿ ಸ್ಪೀಡ್ ಬಾಲ್ ಪ್ರಾತ್ಯಕ್ಷತೆ

ಶೃಂಗೇರಿ: ರೋಟರಿ ಕ್ಲಬ್‌ ವತಿಯಿಂದ ನೆಮ್ಮಾರು ಶಾಲೆಯಲ್ಲಿ ಸ್ಪೀಡ್ ಬಾಲ್ ಪ್ರಾತ್ಯಕ್ಷತೆ

ಶೃಂಗೇರಿ: ಸೆಪ್ಟಂಬರ್‌ 19 ಶುಕ್ರವಾರದಂದು ರೋಟರಿ ಕ್ಲಬ್‌ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಮ್ಮಾರು ಶಾಲೆಯಲ್ಲಿ ಸ್ಪೀಡ್ ಬಾಲ್ ಪ್ರಾತ್ಯಕ್ಷತೆಯನ್ನು ನಡೆಸಲಾಯಿತು .

ರೋಟರಿ ಕ್ಲಬ್ ನಾ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ಹೆಗಡೆಯವರು ಸೀಡ್ ಬಾಲ್ ತಯಾರಿಕೆ ಮತ್ತು ಮತ್ತು ಇದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಇದೇ ವೇಳೆ ಇನ್ನರ್ವಿಲ್ ಕ್ಲಬ್ ವತಿಯಿಂದ ಶಾಲಾ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶಾಲೆಯ ಪರಿಸರದಲ್ಲಿ ಹಲಸು, ಮಾವು, ಪೇರಲೆ, ಕಿತ್ತಳೆ ಮತ್ತು ಹೂವಿನ ಗಿಡಗಳಾದ ದಾಸವಾಳ ವಿವಿಧ ಗಿಡಗಳನ್ನು ನೆಡಲಾಯಿತು.

ನಂತರ ಇನ್ನರ್ ವೀಲ್ ಅಧ್ಯಕ್ಷ ಮಂಜುಳಾ ಸುಬ್ರಮಣ್ಯ ಮಾತನಾಡಿ, ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಕಳಕಳಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಹಣ್ಣಿನ ಗಿಡವನ್ನು ನೆಡುವುದರಿಂದ ಪ್ರಾಣಿ ಪಕ್ಷಿಗಳಿಗೂ ಆಹಾರ ದೊರೆಕಿದಂತಾಗುತ್ತದೆ ಈ ಮೂಲಕ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಸ್ವಚ್ಛವಾದ ಉಸಿರಾಡುವ ಗಾಳಿ ಸಿಗಬೇಕಾದರೆ ನಾವು ಪರಿಸರವನ್ನು ಬೆಳೆಸಿ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಅಂಬಲಮನೆ, ಮುಖ್ಯೋಪಾಧ್ಯಾಯರಾದ ಶ್ರೀನಾಥ್ ಸರ್ Rtn, ಸಿದ್ದಪ್ಪ ಹೆಚ್ಎಸ್, Rtn, ವೀರಪ್ಪಗೌಡ, Rtn, ರವೀಂದ್ರ ಎಂ ಸಿ Rtn, ಸೌಮ್ಯ ವಿಜಯ್ ಕುಮಾರ್, ಪೂರ್ಣಿಮಾ ಸಿದ್ದಪ್ಪ, ಭಾಗ್ಯ ವೀರಪ್ಪಗೌಡ, ಉಪಸ್ಥಿತರಿದ್ದರು.

ವರದಿ: ವಿಠಲ್‌, ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!