Wednesday, August 12, 2026
Homeಕ್ರೈಮ್ಬಾಳೆಹೊನ್ನೂರು: ಪಟ್ಟಣದಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ, ಭಯದಲ್ಲಿರುವ ಶಾಲಾ ಮಕ್ಕಳು!

ಬಾಳೆಹೊನ್ನೂರು: ಪಟ್ಟಣದಲ್ಲಿ ನಿಲ್ಲದ ಬೀದಿ ನಾಯಿಗಳ ಹಾವಳಿ, ಭಯದಲ್ಲಿರುವ ಶಾಲಾ ಮಕ್ಕಳು!

Telegram Group
Join Now

ಎನ್ಆರ್ ಪುರ : ತಾಲೂಕಿನ ಬಾಳೆಹೊನ್ನೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅಲ್ಲಿನ ಜನರಿಗೆ ಓಡಾಡುವುದಕ್ಕೆ ಕಷ್ಟವಾಗಿದೆ. ಹೀಗಾಗಿ ಅವುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಬೇಕೆಂದು ಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳು, ಸ್ಥಳೀಯರು ಒತ್ತಾಯಿಸಿದ್ದಾರೆ.

ಪಂಚಾಯತಿ ಅವಣದ ಸುತ್ತಾಮುತ್ತಾ ಬೀದಿನಾಯಿಗಳ ಹಾವಳಿ ಮಾತ್ರ ವಿಪರೀತವಾಗಿದ್ದು ಅಲ್ಲಿ ಜನ ಓಡಾಡಲು ಹೆದರುತ್ತಿದ್ದಾರೆ. ಹಾಗೆ ಕಾನ್ಕೆರೆ ರಸ್ತೆಯಲ್ಲಿ 30ಕ್ಕೂ ಹೆಚ್ಚು ನಾಯಿಗಳ ಸಂಚರಿಸುತ್ತಿದ್ದು ಮುಂಜಾನೆ ವಾಕ್ ಮಾಡಲು ಹಾಗೂ ದಾರಿಯಲ್ಲಿ ತಿರುಗಾಡಲು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ನಾಗರೀಕರು ದೂರನ್ನು ಹೇಳಿದ್ದಾರೆ

ಇದೇ ವೇಳೆ ಕಡ್ಲೆಮಕ್ಕಿ ರಸ್ತೆಯಲ್ಲಿ ಆಟೋ ರಿಕ್ಷಕ್ಕೆ ಹತ್ತುವ ಸಂದರ್ಭದಲ್ಲಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಲು ಬಂದಿದ್ದು ಆಗ ತಕ್ಷಣ ಆಟೋ ಡ್ರೈವರ್ ಮಗುವನ್ನು ರಕ್ಷಣೆ ಮಾಡಿದ್ದಾರೆ. ಹಾಗೆ ಬಸ್‌ ಸ್ಟ್ಯಾಂಡ್‌ ಆವರಣದಲ್ಲೂ ಸಹ ನಾಯಿಗಳು ಟಿಕ್ಕಾಣಿ ಹೂಡಿದ್ದು ಬಸ್‌ ಕಾಯಲು ನಿಂತ ಸ್ಥಳಿಯರಗೂ ಸಹ ಭಯ ಆವರಿಸಿದ್ದು ಕೂಡಲೇ ನಾಯಿಗಳನ್ನು ಇಲ್ಲಿಂದ ಸ್ಥಳಾಂತರಿಸಲು ಮನವಿ ಮಾಡಿಕೊಳ್ಳಲಾಗುತ್ತಿದೆ.

ಈ ವೇಳೆ ಗ್ರಾಮ‌ ಪಂಚಾಯತ್ ಅಧ್ಯಕ್ಷ ರವಿಚಂದ್ರ ಮಾತನಾಡಿ ಸುಪ್ರೀಂಕೋರ್ಟ್ ಆದೇಶದ ಅನ್ವಯ ನಾಯಿಗಳನ್ನು ಹಿಡಿಯುವಂತಿಲ್ಲ. ನಾಯಿಗಳನ್ನು ಹಿಡಿದು ಪ್ರತ್ಯೇಕ ಜಾಗದಲ್ಲಿ ಬಿಡಲು ಜಿಲ್ಲಾಧಿಕಾರಿಗಳು ಆದೇಶ ನೀಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಏನು ಮಾಡಲಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋರಿದರು.

ಆದರೂ ನಾಯಿಗಳನ್ನು ಇಲ್ಲಿಂದ ಸಾಗಾಹಾಕಲು ಪ್ರಯತ್ನ ಪಡಿಲಿಲ್ಲವಾದರೆ ಪ್ರತಿಭಟನೆ ಮಾಡುವುದಾಗಿ ಸ್ಥಳಿಯರು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments