Tuesday, February 10, 2026
Homeಜಿಲ್ಲಾಸುದ್ದಿಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ!

ಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ!

ಶೃಂಗೇರಿ: ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ ಶೃಂಗೇರಿ, ರೋಟರಿ ಕ್ಲಬ್ ಶೃಂಗೇರಿ, ಇನ್ನರ್ವೀಲ್ ಕ್ಲಬ್ ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಡೆಪ್ಯೂಟಿ ಮೆಡಿಕಲ್ ಸೂಪರ್ ಡೆಂಟ್ ಇವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ರೋಟರಿ ಕ್ಲಬ್ ಅಧ್ಯಕ್ಷರಾದ ಸುಬ್ರಮಣ್ಯ ಅಂಬಲಮನೆ ಅವರು ಮಾತನಾಡಿ, ಋಷಿಮುನಿಗಳ ಕಾಲದಿಂದಲೂ ಆಯುರ್ವೇದ ಔಷಧಿಯನ್ನು ಬಳಸಲಾಗುತ್ತಿದ್ದುದ್ದು ತುಂಬಾ ಇತಿಹಾಸ ಇದೆ ಹಾಗೂ ಇಂಗ್ಲೀಷ್ ಮೆಡಿಸಿನ್ ನಂತೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂದರು.

ಶಾರದಾ ಧನ್ವಂತರಿ ಆಸ್ಪತ್ರೆಯವರು ಸಾರ್ವಜನಿಕರಿಗಾಗಿ ಉತ್ತಮ ಕೆಲಸವನ್ನು ಮಾಡುತ್ತಿದ್ದು ಮುಖ್ಯ ವೈದ್ಯಾಧಿಕಾರಿಯಾದ ಸುಹಾಸ್ ಹೆಚ್. ಡಿ. ಇವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ ಮತ್ತು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಡಾ. ಲಕ್ಷ್ಮೀ ರಾಘವನ್ ಅವರನ್ನು ರೋಟರಿ ಸಂಸ್ಥೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು. ಡಾ. ಸುಹಾಸ್ ರವರು ಸರ್ವರನ್ನು ಸ್ವಾಗತಿಸಿದರು. ಮಂಜುನಾಥಗೌಡ ಹೆಚ್.ಎಂ. ನಿರೂಪಣೆ ಮಾಡಿದರು. ರೋಟ್ರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷ ಐಶ್ವರ್ಯ ಟಿ .ಆರ್. ವಂದಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗ್ಡೆ ,ಜೋನಲ್ ಲೆಫ್ಟಿನೆಂಟ್ ಮಹೇಶ್ ಡಿ. ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಮಂಜುಳಾ ಸುಬ್ರಮಣ್ಯ, ಸಿದ್ದಪ್ಪ ಹೆಚ್.ಎಸ್., ಸೌಮ್ಯ ವಿಜಯಕುಮಾರ್, ವೀರಪ್ಪಗೌಡ, ಪೂರ್ಣಿಮಾ ಸಿದ್ದಪ್ಪ, ಭುವನೇಶ್ವರಿ ಬಲ್ಲಾಳ್, ಭಾಗ್ಯ ವೀರಪ್ಪ ಗೌಡ ಉಪಸ್ಥಿತರಿದ್ದರು.

ವರದಿ: ವಿಠಲ್‌ ಶೃಂಗೇರಿ

7676798969

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!