ಮೂಡಿಗೆರೆ: ನಗರದ ಡಾ. ಬಿ. ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೌತಮ ಬುದ್ಧ ಪರಿಶಿಷ್ಟ
ಜಾತಿ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಬಿ. ಬಿ ನಿಂಗಯ್ಯ ಅವರು, ಸಂಘದಲ್ಲಿ 800ಕ್ಕೂ ಹೆಚ್ಚು ಸದಸ್ಯರಿದ್ದು 22 ಲಕ್ಷ ವಹಿವಾಟು ನಡೆಸುತ್ತಿರುವುದು ಖುಷಿ ವಿಷಯವಾಗಿದೆ.

ಐದು ವರ್ಷಗಳ ಹಿಂದೆ ಸ್ಥಾಪಿತವಾದ ಸಂಘ ಮುಂಚೂಣಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಹಸೂಗೂಸಿನಂತೆ ಆರಂಭವಾಗಿರುವ ಸಂಘವು ಬೆಳೆದು ಜಿಲ್ಲೆಗೆ ಮಾದರಿಯಾಗಲಿ ಎಂದು ಹಾರೈಸಿದರು.
ಸಹಕಾರ ಸಂಘದ ಸಭೆ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಜಿ.ಟಿ.ಬಸವರಾಜ್ ಪ್ರಸ್ತುತ 10 ಲಕ್ಷ ಸಾಲ ಸೌಲಭ್ಯ ಒದಗಿಸಿದ್ದು, ವಸೂಲಾತಿ ಕಾರ್ಯ ಕೂಡ ನಡೆಯುತ್ತಿದೆ ಎಂದರು. ಸಹಕಾರ ಸಂಘ ಆರ್ಥಿಕ ಲಾಭಂಶ ಗಳಿಸುವ ಮೂಲಕ ಮುಂಚೂಣಿಯಲ್ಲಿದೆ ಎಂದರು
ಈ ಸಂದರ್ಭದಲ್ಲಿ ಸಂಘದ ಗೌರವ ಕಾರ್ಯದರ್ಶಿ ಹಂಪಯ್ಯ,ಉಪಾಧ್ಯಕ್ಷ ಶಂಕರ್. ನಿರ್ದೇಶಕರಾದ ಶಾಂತಕುಮಾರ್, ಗೋಪಾಲ,ವೇಲಾಯುದನ್,ನಾಗರಾಜ್.ಪಾರ್ವತಮ್ಮ. ರೇಣುಕಾ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
