Saturday, June 27, 2026
Homeಕ್ರೈಮ್Sringeri: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೋರ್ವನ ಸ್ಥಿತಿ ಚಿಂತಾಜನಕ!

Sringeri: ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೋರ್ವನ ಸ್ಥಿತಿ ಚಿಂತಾಜನಕ!

ಶೃಂಗೇರಿ:  ತಾಲೂಕಿನ ಮೆಣಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡ್ಲೆ ಬಳಿ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಮತ್ತೋರ್ವ ಯುವಕ ಪ್ರಾಣಾಪಾಯದಿಂದ ಪಾರಾಗಿರುತ್ತಾನೆ.

ಮೃತ ವ್ಯಕ್ತಿ ಆಲ್ದೂರು ಸಮೀಪದ  ಆಲ್ದೂರು ಸಮೀಪದ ಕಸ್ಕೆಮನೆ ಅಭಿಷೇಕ್ (26) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಸವಾರ ಸುಶಾಂತ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಶೃಂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದೆ

ಶೃಂಗೇರಿ ಹೆದ್ದಾರಿ ಗಸ್ತು ವಾಹನವು ಕುಂಚೆಬೈಲು ಕಡೆಗೆ ಗಸ್ತಿನಲ್ಲಿ ಇದ್ದಾಗ ಸುಮಾರು 12.30ರ ವೇಳೆಗೆ  ಕೆ.ಎ. 18 ಇ.ಎನ್. 71 52 ಸಂಖ್ಯೆಯ ಬೈಕ್ ಜಯಪುರದಿಂದ ಶೃಂಗೇರಿ ಮಾರ್ಗವಾಗಿ ತೆರಳುತ್ತಿದ್ದು, ಶಿಡ್ಲೆ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಘಟನೆ ಸಂಬಂಧ ಶೃಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments