Tuesday, August 11, 2026
Homeಜಿಲ್ಲಾಸುದ್ದಿAwareness campaign: ಶೃಂಗೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ʼನಿಂದ SIR ಕುರಿತು ಜಾಗೃತಿ ಅಭಿಯಾನ: ಸಾರ್ವಜನಿಕರಿಗೆ ಕೈಪಿಡಿ ವಿತರಣೆ!

Awareness campaign: ಶೃಂಗೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ʼನಿಂದ SIR ಕುರಿತು ಜಾಗೃತಿ ಅಭಿಯಾನ: ಸಾರ್ವಜನಿಕರಿಗೆ ಕೈಪಿಡಿ ವಿತರಣೆ!

Telegram Group
Join Now

ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಭಟ್ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದಲ್ಲಿ ವಿಶೇಷ ತೀವ್ರ ಪರಿಷ್ಕರಣೆ(SIR) ಬಗ್ಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು.

ಬಸ್ ಗಳಲ್ಲಿ ಇದ್ದ ಪ್ರಯಾಣಿಕರು ಹಾಗೂ ಸ್ಥಳೀಯ ಅಂಗಡಿ, ಆಟೋ ನಿಲ್ದಾಣಗಳಿಗೂ ದೇವನೂರು ಮಹದೇವ್ ಬರೆದು ಮಲೆನಾಡು ಕರಾವಳಿ ಜನಪರ ಒಕ್ಕೂಟ ಪ್ರಕಟಿಸಿರುವ  ʼವಿಶೇಷವೋ ವಿಕಾರವೋ ʼ ಕೈಪಿಡಿಯನ್ನು ಕೊಟ್ಟು  SIR ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಈ ಅಭಿಯಾನದಲ್ಲಿ ಮುಖಂಡರಾದ ಕುರಾದ ಮನೆ ವೆಂಕಟೇಶ್, ಕಾರ್ಯದರ್ಶಿ ಸುಂದ್ರೇಶ್, ಕಿಗ್ಗಾ ಹೋಬಳಿ ಅಧ್ಯಕ್ಷ ರಾಜ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಲಕ್ಷ್ಮೀಶ್, ಕಾರ್ಯಧ್ಯಕ್ಷ ಅಜಿತ್, ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ, ಕವೀಶ್, ದಿನೇಶ್ ಶೆಟ್ಟಿ, ರತ್ನಾಕರ್, ಸಂತೋಷ್ ಕಾಳ್ಯ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments