Tuesday, February 10, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ

ಚಿಕ್ಕಮಗಳೂರು: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ

ಚಿಕ್ಕಮಗಳೂರು: ಇಂದಿನ ದಿನಮಾನದಲ್ಲಿ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾ ಡಿ, ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಅಪರೂಪದ ವ್ಯಕ್ತಿ ಎಂದರೆ ಕರ್ನಾಟಕ ರತ್ನ ಡಾ. ಪುನೀತ್‌ರಾಜ್‌ಕುಮಾರ್ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದ ಅಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ಬುಧ ವಾರ ಏರ್ಪಡಿಸಿದ್ಧ ನಟ ಡಾ. ಪುನೀತ್‌ರಾಜ್‌ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿ ಸಿ ಪುತ್ಥಳಿಗೆ ಪುಷ್ಪಾರ್ಚಾನೆ ನೆರವೇರಿಸಿ ಅವರು ಮಾತನಾಡಿದರು.

ನಗುಮುಖದ ಒಡೆಯ ಪುನೀತ್‌ರನ್ನು ಕಂಡರೆ ಹಿರಿಯರು, ಕಿರಿಯರು ಬಹಳಷ್ಟು ಪ್ರೀತಿ ತೋರುತ್ತಿ ದ್ದರು. ಡಾ. ರಾಜ್‌ಕುಮಾರ್ ಮೇಲಿರುವ ಪ್ರೀತಿಯಷ್ಟೇ, ಪುನೀತ್‌ರಾಜ್‌ಕುಮಾರ್‌ಗೆ ಅಷ್ಟೇ ಪ್ರೀತಿಯನ್ನು ಕನ್ನಡಿಗರು ತೋರಿದ್ದಾರೆ. ಆಕರ್ಷಿಕ ವ್ಯಕ್ತಿತ್ವ ಹಾಗೂ ಆ ನಗು ಪರಿಚಯಿಲ್ಲದವರನ್ನು ಆಕರ್ಷಿಸುವ ಶಕ್ತಿ ಅ ವರ ನಗುವಿನಲ್ಲಿತ್ತು ಎಂದರು.

ಸಾಮಾನ್ಯವಾಗಿ ನಾವೆಲ್ಲಾ ಜನಿಸಿದಾಗ ಎಳೆವಯಸ್ಸಿನಲ್ಲಿ ಮುದ್ದಿನಂತೆ ಕಾಣುತ್ತಿದ್ದು, ವಯಸ್ಸಾದ ಬಳಿಕ ನಮ್ಮಗಳ ಮುಖವು ಬಾಡಿದಂತಾಗಿರುತ್ತದೆ. ಮಕ್ಕಳಿದ್ದಾಗ ಪರಿಶುದ್ದ ಮನಸ್ಸನ್ನು ಜೀವನಪೂರ್ತಿ ಕಾಯ್ದು ಕೊಂಡು ಬರುವುದು ಬಹಳಷ್ಟು ಕಷ್ಟದ ಕೆಲಸ. ಕೆಲವೇ ಕೆಲವರಿದ್ದು. ಆ ಪೈಕಿ ಪುನೀತ್‌ರಾಜ್‌ಕುಮಾರ್ ಆ ಮುದ್ದು ಮನಸ್ಸಿನ ಮುಖವನ್ನು 40ರ ವಯಸ್ಸಿನಲ್ಲೂ ತಪಸ್ಸಿನಿಂದ ಕಾಪಾಡಿಕೊಂಡಿದ್ದರು ಎಂದರು.

ಚಿಕ್ಕವಯಸ್ಸಿನಲಿ ಅಭಿನಯದ ಎಲ್ಲಾ ಗುಣಗಳನ್ನು ಹೊಂದಿದ್ದರು. ಪ್ರಸ್ತುತ ಕಾಲಮಾನದಲ್ಲಿ ಪುನೀತ್ ಜೀವಂತವಾಗಿದ್ದರೆ ಭಾರತದಲ್ಲೇ ಪ್ರಸಿದ್ಧ ನಟರಾಗಿ ಹೊರಹೊಮ್ಮುತ್ತಿದ್ದರು. ಬಾಲನಟನಾಗಿಯೇ ರಾಷ್ಟ್ರಪತಿ ಪ್ರಶಸ್ತಿ ಪಡೆದುಕೊಂಡು, ದೈವದತ್ತವಾದ ಅವರಿಗೆ ಕಲೆಯ ಆರ್ಶೀವಾದವಿತ್ತು ಎಂದರು.

ಪುನೀತ್‌ರವರ ಅಕಾಡೆಮಿಯಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾರ್ಥಿವೇತನ, ಸ್ಪರ್ಧಾತ್ಮಕ ಪರೀಕ್ಷೆ ಅಣಿ ಗೊಳಿಸುವ ಕೆಲಸ ಮಾಡುತ್ತಿದ್ದರು. ಆ ಅಕಾಡೆಮಿಯ ಉದ್ಘಾಟನೆ ನೆರವೇರಿಸಿದ್ದೆ. ಮುಂದಿನ ವರ್ಷವು ಆಗ ಮಿಸಬೇಕೆಂದು ಪುನೀತ್‌ರವರ ಕರೆಯೋಲೆಯಿತ್ತು. ಆದರೆ ಆಕಸ್ಮಿಕವಾಗಿ ಅನಿರೀಕ್ಷಿತ ಸಾವಿನಿಂದ ಮೃತರಾ ದ ಪುನೀತ್ ಕೋಟ್ಯಾಂತರ ಅಭಿಮಾನಿಗಳ ಘಾಸಿಯಂಟಾಯಿತು ಎಂದರು.

ನಗರದಲ್ಲಿ ನಿರ್ಮಿಸಿರುವ ಪುನೀತ್‌ರವರ ಪ್ರತಿಮೆಯಷ್ಟೇ ಕರ್ನಾಟಕ ಗಡಿನಾಡಿನಲ್ಲಿಯೂ ಮತ್ತೊಂ ದು ಪ್ರತಿಮೆ ನಿರ್ಮಿಸಿದ್ದಾರೆ. ಪ್ರೀತಿಗೆ ಯಾವುದೇ ರೀತಿ ಸೀಮೆ ಗಡಿಯಿಲ್ಲ. ಭಾಷೆ ಗಡಿಯಿಲ್ಲ, ಭಾವನೆ ಗಳು ಮಾತ್ರ ಇರಲಿವೆ. ಅಂತ ಭಾವನೆ ಕರ್ನಾಟಕಾದ್ಯಂತ ಪುನೀತ್‌ರವರು ಹುಟ್ಟುಹಾಕಿದ್ದಾರೆ ಎಂದರು.

ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್ ಮಾತನಾಡಿ ರಾಜ್‌ಕುಮಾರ್ ಅಭಿಮಾನಿಗಳ ಸಂಘವ ನ್ನು ೧೯೮೩ರ ಇಸವಿಯಲ್ಲಿ ಪ್ರಾರಂಭಗೊಂಡಿತು. ರಾಜ್ಯಾದ್ಯಂತ ಸುಮಾರು ೧೫೭೦೦ ಸಂಘಗಳನ್ನು ತಮ್ಮ ನಾಯಕತ್ವದಲ್ಲಿ ಮಾಡಲಾಗಿದೆ. ಆದರೆ ಇಡೀ ದೇಶದಲ್ಲೇ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘವು ಸ್ಥಾಪನೆಯೇ ಆಗಿಲ್ಲ ಎಂದು ತಿಳಿಸಿದರು.

ಒಂದು ಸರ್ಕಾರವನ್ನು ಅಲುಗಾಡಿಸುವ ಶಕ್ತಿ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘಕ್ಕಿತ್ತು. ಮಲೆ ನಾಡು ಸೊಬನ್ನು ಹೊತ್ತಿಕೊಂಡಿರುವ ಜಿಲ್ಲೆ ಪುನೀತ್‌ರವರ ಕಾರ್ಯಕ್ರಮಕ್ಕೆ ತನ್ನ ಒಡಲಿನಿಂದ ಒಂದು ಹನಿ ಯು ಮಳೆಯನ್ನು ಭೂಮಿಯತ್ತ ಕೊಂಡೊಯ್ಯದೇ ನೆಚ್ಚಿನ ನಟನಿಗೆ ಗೌರವಿಸುವಂತ ಕೆಲಸ ಪ್ರಕೃತಿ ದೇವತೆ ಮಾಡಿದೆ ಎಂದು ಹೇಳಿದರು.

ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಕಲಾಕ್ಷೇತ್ರದಲ್ಲಿ ನಟಿಸುವ ಮೂಲಕ ಸಾರ್ವಜನಿಕ ಸೇವೆಯ ಲ್ಲಿ ತೊಡಗುವ ಮೂಲಕ ಪುನೀತ್‌ರಾಜ್ ಅಭಿಮಾನಿಗಳ ಆರಾಧ್ಯ ನಟರಾದವರು. ನೆಚ್ಚಿನ ಅಗಲಿದ ನೋ ವು ಕೇವಲ ಕುಟುಂಬಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯಾದ್ಯಂತ ಕನ್ನಡಿಗರಿಗೆ ತುಂಬಲಾರದ ನಷ್ಟ ಉಂಟಾ ಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಡಾ|| ರಾಜ್‌ಕುಮಾರ್ ಗೋಕಾಕ್ ಚಳುವಳಿಯಿಂ ದಲೇ ರಾಜ್ಯದಲ್ಲಿ ಗೋಕಾಕ್ ಪ್ರದೇಶ ಉಳಿದುಕೊಂಡಿತು. ಆ ದಾರಿಯಲ್ಲಿ ಅಭಿಮಾನಿಗಳ ದೇವರೆಂದು ಬಿಂ ಬಿಸಿಕೊಂಡು ಸಾಗಿದ ಅಪರೂಪ ನಾಯಕ ಪುನೀತ್‌ರಾಜ್‌ಕುಮಾರ್ ಆದರ್ಶಗಳನ್ನು ನಾವೆಲ್ಲರೂ ಮೈಗೂ ಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ಶಾಸಕ ಟಿ.ಡಿ.ರಾಜೇಗೌಡ, ಡಾ. ರಾಜ್‌ಕುಮಾ ರ್ ಅಬಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ.ಓಂಕಾರೇಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಖಜಾಂ ಚಿ ಕುಮಾರ್, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯೆ ರೂಪಕುಮಾರ್ ಮತ್ತಿತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!