Tuesday, February 10, 2026
Homeಜಿಲ್ಲಾಸುದ್ದಿಸಕಲೇಶಪುರದಲ್ಲಿ ಡಿಜೆ ವಾರ್: ಪೊಲೀಸರು-ಭಕ್ತರ ನಡುವೆ ವಾಗ್ವಾದ, ಅನಾಥವಾದ ಗಣಪತಿ!

ಸಕಲೇಶಪುರದಲ್ಲಿ ಡಿಜೆ ವಾರ್: ಪೊಲೀಸರು-ಭಕ್ತರ ನಡುವೆ ವಾಗ್ವಾದ, ಅನಾಥವಾದ ಗಣಪತಿ!

ಹಾಸನ: ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಆಫ್ ಮಾಡಿಸಿದ ಖಾಕಿ ಹೀಗಾಗಿ ಗಣಪತಿ ಸೇವಾ ಸಮಿತಿ ಸದಸ್ಯರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.

ಹೌದು .. ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ೀ ವೇಳೆ ಡಿಜೆ ಹಾಕಿಕೊಂಡು ಹೋಗುತ್ತಿರುವಾಗ ಈ ಮಧ್ಯೆ ಪೊಲೀಸರ ಪ್ರವೇಶ ಆಗಿದ್ದು ಅವರು ನಡು ಮಧ್ಯದಲ್ಲೇ ಡಿಜೆ ಆಫ್‌ ಮಾಡಿಸಿದ್ದಾರೆ ಇದರಿಂದ ರೊಚ್ಚಿಗೆದ್ದ ನೂರಾರು ಮಂದಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಗಣಪತಿ ಮೆರವಣಿಗೆ ನಿಲ್ಲಿಸಿ ರಸ್ತೆಯಲ್ಲಿ ಧರಣಿ ಕುಳಿತರು.

ಬುಧವಾರ ರಾತ್ರಿ ಹತ್ತು ಗಂಟೆಗೆ ಡಿಜೆ ಬಂದ್ ಮಾಡಿಸಿದ ಪೊಲೀಸರು ಇದರಿಂದ ರೊಚ್ಚಿಗೆದ್ದ ಗಣಪತಿ ಸೇವಾ ಸಮಿತಿ ಸದಸ್ಯರು ಈ ವೇಳೆ ಪೊಲೀಸರು- ಗಣಪತಿ ಸೇವಾ ಸಮಿತಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಹಾಗೆ 10.30ರವರೆಗೆ ಅನುಮತಿ ಇದೆ, ಡಿಜೆ ಹಾಕುವಂತೆ ಒತ್ತಾಯ ಮಾಡಿದ ಕಾರ್ಯಕರ್ತರು ಆದರೂ ಬಿಡದ ಪೊಲೀಸರು ಈ ಹಿನ್ನೆಲೆಯಲ್ಲಿ ವಾಗ್ವಾದ ನಡೆದಿದೆ.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ಗಂಡ ಹೆಂಡತಿ ಮಧ್ಯ ಜಗಳವಾದಾಗ ಕೂಸು ಬಡವಾದಂಗೆ ಇವರ ಮಧ್ಯ ವಾಗ್ವಾದಕ್ಕೆ ರಸ್ತೆಯಲ್ಲಿಯೇ ಅನಾಥವಾದ ಗಣಪತಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!