Tuesday, February 10, 2026
Homeಜಿಲ್ಲಾಸುದ್ದಿಮೂಡಿಗೆರೆ : ಹೋಂ ಸ್ಟೇ ಮಾಲೀಕರಿಂದ ಪರಿಸರ ಹಾನಿ: ಬೈದುವಳ್ಳಿ ಗ್ರಾಮಸ್ಥರ ಆರೋಪ

ಮೂಡಿಗೆರೆ : ಹೋಂ ಸ್ಟೇ ಮಾಲೀಕರಿಂದ ಪರಿಸರ ಹಾನಿ: ಬೈದುವಳ್ಳಿ ಗ್ರಾಮಸ್ಥರ ಆರೋಪ

ಮೂಡಿಗೆರೆ: ಮಲೆನಾಡಿನ ಪ್ರಕೃತಿ ಸೊಬಗು ಸವಿಯಲು ಬರುವ ಪ್ರವಾಸಿ ಗರು ಪ್ಲಾಸ್ಟಿಕ್‌ ಬಾಟಲ್‌ ಮತ್ತು ಇತರೆ ತ್ಯಾಜ್ಯ ಎಸೆದು ಹಾಳು ಮಾಡಿದ್ದ ಪರಿಸರ ಇದರಿಂದ ಪರಿಸರ ಹಾನಿಯಾಗುತ್ತಿದೆ ಎಂದು ಬೈದುವಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಕುರಿತು ಪಬ್ಲಿಕ್ ಇಂಪ್ಯಾಕ್ಟ್ ಗೆ ಪ್ರತಿಕ್ರಿಯಿಸಿ ಮಾತನಾಡಿದ ರಂಜಿತ್ ಇಲ್ಲಿನ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರು ಕಸವನ್ನು ಮನಸ್ಸಿಗೆ ಬಂದ ಕಡೆ ಬಿಸಾಕುತ್ತಿದ್ದೂ ಗ್ರಾಮಸ್ಥರಿಗೆ ತೊಂದರೆ ಯಾಗುತ್ತಿದೆ ಎಂದರು.

ಮಲೆನಾಡಿನ ಪ್ರಕೃತಿ ಸೊಬಗು ಸವಿಯಲು ಬರುವ ಪ್ರವಾಸಿ ಗರು ಪ್ಲಾಸ್ಟಿಕ್‌ ಬಾಟಲ್‌ ಮತ್ತು ಇತರೆ ತ್ಯಾಜ್ಯ ಎಸೆದು ಹಾಳು ಮಾಡಿದ್ದ ಪರಿಸರವನ್ನು ಹಾಳು ಮಾಡುತ್ತಿದ್ದು. ಇದನ್ನು ಸೇವಿಸಿದ ಜಾನುವಾರುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿವೆ.

ಇಲ್ಲಿನ ಹೋಂ ಸ್ಟೇ ಹಾಗೂ ರೆಸಾರ್ಟ್‌ ಮಾಲೀಕರ ವರ್ತನೆ ಖಂಡನಿಯ, ಆರೋಗ್ಯದ ಹಿತದೃಷ್ಟಿಯಿಂದ ಸಂಬಂಧ ಪಟ್ಟ ಅಧಿಕಾರಿಗಳು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಗ್ರಾಮದ ಸುತ್ತ ಮುತ್ತಲ ಹೊಂಸ್ಟೇ ಮತ್ತು ರೆಸಾರ್ಟ್‌ನ ಕೆಲವು ಮಾಲಿಕರು ರಸ್ತೆಯ ಬದಿಗೆ ಹಾಗೂ ಮೈದಾನಕ್ಕೆ ಪ್ಲಾಸ್ಟಿಕ್‌, ಮದ್ಯದ ಬಾಟಲ್‌ ಹಾಗೂ ಇತರೆ ತ್ಯಾಜ್ಯಗಳನ್ನು ಸುರಿಯುತ್ತಿದ್ದೂ ಪರಿಸರವನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಕೊರ ಹಾಕಿದರು

ಗ್ರಾಮಸ್ಥ ಆಕಾಶ್ ಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿಮಲೆನಾಡಿನ ಪರಿಸರ ತಾಣಗಳ ಸೌಂದರ್ಯ ಸವಿ ಯಲು ಬರುವ ಪ್ರವಾಸಿಗರು, ಅಲ್ಲಲ್ಲಿ ಮದ್ಯಪಾನ ಮತ್ತು ಮೋಜು ಮಸ್ತಿ ಮಾಡಿ, ತ್ಯಾಜ್ಯಗಳನ್ನು ಎಸೆದು ಹೋಗುವುದು ಸಾಮಾನ್ಯವಾಗಿದೆ. ವೀಕೆಂಡ್‌ಗಳಲ್ಲಿ,ಮತ್ತು ಇತರೆ ರಜೆದಿನಗಳಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಬರುವ ಪ್ರವಾಸಿಗರು ಮಾತ್ರವಷ್ಟೆ ಅಲ್ಲದೆ, ಟ್ರಕ್ಕಿಂಗ್‌ ನೆಪದಲ್ಲಿ ಬೈಕ್‌ಗಳು ಹಾಗೂ ಇತರೆ ವಾಹನಗಳಲ್ಲಿ ಬರುವ ಯುವಕರು ಕೂಡ ಪರಿಸರ ನ ಹಾಳುಮಾಡುತ್ತಿದ್ದಾರೆ ಎಂದು ಆರೋಪಿಸಿದರು

ತಾಲೂಕಿನ ಬೈರಾಪುರ. ದೇವರಮನೆ. ಕುಂಬರಡಿ,ಪಟ್ಟಣ ಸುತ್ತಮುತ್ತಲು ಬಹುತೇಕ ಎಲ್ಲಾಭಾಗಗಳಲ್ಲಿಯೂ ಇಂತಹದೆ ತ್ಯಾಜ್ಯದ ರಾಶಿ ಗಳು ಅಲ್ಲಲ್ಲಿಕಂಡುಬರುತ್ತಿದ್ದು ಇದಕ್ಕೆ ಸುತ್ತಮುತ್ತಲ ಹೋಂ ಸ್ಟೇ ಮತ್ತು ರೆಸಾರ್ಟ್‌ ಮಾಲಿಕರು ನೇರ ಹೊಣೆ ಎಂದರು. ಇಂತವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಈ ಸಂದರ್ಭದಲ್ಲಿ ಶರತ್. ಹರ್ಷ. ಸೇರಿದಂತೆ ಗ್ರಾಮಸ್ಥರು ಇದ್ದರು

ವರದಿ :ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!