Tuesday, February 10, 2026
Homeಜಿಲ್ಲಾಸುದ್ದಿಕಡಿದಾಳು ಗ್ರಾಮದ ಕಣ್ವ ಪಟೇಲ್ ಕರ್ನಾಟಕ ಬ್ಯಾಂಕ್ IT ವಿಶೇಷ ಅಧಿಕಾರಿಯಾಗಿ ನೇಮಕ

ಕಡಿದಾಳು ಗ್ರಾಮದ ಕಣ್ವ ಪಟೇಲ್ ಕರ್ನಾಟಕ ಬ್ಯಾಂಕ್ IT ವಿಶೇಷ ಅಧಿಕಾರಿಯಾಗಿ ನೇಮಕ

ಮೂಡಿಗೆರೆ: ಕರ್ನಾಟಕ ಬ್ಯಾಂಕ್ IT ವಿಶೇಷ ಅಧಿಕಾರಿಯಾಗಿ ಕಡಿದಾಳು ಗ್ರಾಮದ ಕಣ್ವ ಪಟೇಲ್ ನೇಮಕಗೊಂಡಿರುತ್ತಾರೆ.

ಹೌದು .. ಶ್ರೀನಿವಾಸ ಟೆಕ್ನಾಲಜಿ ಇನ್ಸ್ಟ ಟ್ಯೂಟ್ ವತಿಯಿಂದ ನೇಮಕಾತಿ ಪ್ರಕ್ರಿಯೆ ನಡೆದಿದ್ದು ಈ ಹುದ್ದೆಗಾಗಿ 6200 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು 40 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಈ ನೇಮಕಾತಿ ಪ್ರಕ್ರಿಯೆಯಲ್ಲಿ ಕಣ್ವ ಪಟೇಲ್ ಸ್ಥಾನ ಪಡೆಯುವುದರ ಮೂಲಕ ಕರ್ನಾಟಕ ಬ್ಯಾಂಕ್ IT ವಿಶೇಷ ಅಧಿಕಾರಿಯಾಗಿ ಆಯ್ಕೆಯಾಗಿರುತ್ತಾರೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ, ಪೋಷಕರು ಮತ್ತು ಸ್ನೇಹಿತರ ಸಹಕಾರದಿಂದಾಗಿ ಈ ಸ್ಥಾನ ಅಲಂಕರಿಸಲು ಸಾಧ್ಯವಾಗಿದೆ ಎಂದರು.

ಈ ಹುದ್ದೆಯಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ದಕ್ಷತೆ ಮತ್ತು ಪ್ರಾಮಾಣಿತೆಯಿಂದ ಕರ್ನಾಟಕ ಬ್ಯಾಂಕ್ ಸಂಸ್ಥೆಯ ಪರವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು

ಕಣ್ವ ಪಟೇಲ್ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳು ಗ್ರಾಮದ ನವೀನ್ ಪಟೇಲ್ ಹಾಗೂ ಶಿಲ್ಪಾ ದಂಪತಿಗಳ ಪುತ್ರ

ಇವರು ಪ್ರೌಢ ಶಿಕ್ಷಣವನ್ನು ಶಾರದಾ ಪಬ್ಲಿಕ್ ಶಾಲೆ ಮಂಗಳೂರು ನಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ವಿದ್ಯಾಭ್ಯಾಸವನ್ನು ಶ್ರೀನಿವಾಸ್ ಟೆಕ್ನಾಲಜಿ ಇನ್ಸ್ಟಾಟ್ಯೂಟ್ ವಳಚಿ ಮಂಗಳೂರು ಕಾಲೇಜಿನಲ್ಲಿ ಮಾಡಿದ್ದು. ಇವರ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪೋಷಕರು ಹಾಗೂ ಕಡಿದಾಳು ಗ್ರಾಮಸ್ಥರು ಪ್ರಶಂಸೆ ವ್ಯಕ್ತ ಪಡಿಸಿದ್ದು ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ವರದಿ : ಪುನೀತ್ ಕಡಿದಾಳ್ 

9483811948

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!