ಚಿಕ್ಕಮಗಳೂರು/ ಹಾಸನ: ಕಳೆದ ಆರು ತಿಂಗಳಲ್ಲಿ 718 ಪ್ರಕರಣ ದಾಖಲು, 619 ಆರೋಪಿಗಳ ಸೆರೆ ಬೆಂಗಳೂರು ಪ್ರಥಮ , ಹಾಸನ ದ್ವಿತೀಯ ಸ್ಥಾನ , ಚಿಕ್ಕಮಗಳೂರು ತೃತೀಯ ಸ್ಥಾನ ಪಡೆದುಕೊಂಡಿದೆ.
ಗಾಂಜಾ ಮಾರಾಟ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದ್ದು ಬೆಂಗಳೂರು ಪ್ರಥಮ, ಹಾಸನ ದ್ವಿತೀಯ, ಚಿಕ್ಕಮಗಳೂರು ಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಈಗಾಗಲೇ ಕೋಟ್ಯಂತರ ರೂ. ಮೌಲ್ಯದ ಗಾಂಜಾ ಪತ್ತೆಮಾಡಿ ನೂರಾರು ಆರೋಪಿಗಳನ್ನು ಬಂಧಿಸಲಾಗಿದ್ದು. ಆದರೂ ದಂಧೆ ನಿರ್ಮೂಲನೆ ಮಾಡುವುದು ಪೊಲೀಸರು ಹಾಗೂ ಅಬಕಾರಿ ಅಧಿಕಾರಿಗಳಿಗೆ ಸವಾಲಾಗಿದ್ದು ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇದ್ದಲ್ಲಿ 112 ಕರೆಮಾಡಿ ತಿಳಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಕರೆನೀಡಿದ್ದಾರೆ .
ಬೆಂಗಳೂರು ನಗರದಲ್ಲಿ 176 ಪ್ರಕರಣ ಪತ್ತೆಯಾಗಿದ್ದರೆ, ಹಾಸನ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಈವರೆಗೆ 120 ಪ್ರಕರಣ ಪತ್ತೆಯಾಗಿದೆ. ಈ ತಿಂಗಳೊಂದರಲ್ಲೇ 19 ಪ್ರಕರಣ ಪತ್ತೆಹೆಚ್ಚಿ ಆರೋಪಿಗಳನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 81 ಪ್ರಕರಣ ಸೇರಿ ರಾಜ್ಯದೆಲ್ಲೆಡೆ ಪ್ರಕರಣ ಪತ್ತೆಹಚ್ಚಿ 619 ಆರೋಪಿಗಳನ್ನು ಬಂಧಿಸಲಾಗಿದೆ. ಪಾಳುಬಿದ್ದ ನಿವೇಶನದಲ್ಲಿ ಗಾಂಜಾ ಬೆಳೆಯುವ, ಎಲ್ಲಿಂದಲೋ ತಂದು ವಿದ್ಯಾರ್ಥಿ, ಯುವಜನರಿಗೆ ಮಾ.ರಾ.ಟ ಮಾಡುವ ಜಾಲ ರಾಜ್ಯ ಸೇರಿದಂತೆ ಹಲವು ಜಿಲ್ಲೆಯಲ್ಲಿ ಸಕ್ರಿಯವಾಗಿರುವುದಕ್ಕೆ ಪ್ರಕರಣ ದಾಖಲಾಗಿರುವುದು ಸಾಕ್ಷಿಯಾಗಿದೆ.
ಈ ಜಾಲದಲ್ಲಿ ಜನಪ್ರತಿನಿಧಿ ಪುತ್ರರು , ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೀಗೆ ಹಲವರು ಅಬಕಾರಿ ಅಧಿಕಾರಿಗಳ ದಾ*ಳಿ ವೇಳೆ ಸಿಕ್ಕಿ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಸಕ್ರಿಯ ಜಾಲದ ಹೆಡೆಮುರಿ ಕಟ್ಟಲು ಅಬಕಾರಿ ಇಲಾಖೆ ಸಿದ್ಧವಾಗಿದ್ದರೂ ಸಂಶಯಾಸ್ಪದ ವ್ಯಕ್ತಿಗಳ ಕಾಲ್‌ಡೀಟೆಲ್ ರಿಪೋರ್ಟ್ (ಸಿಡಿಆರ್) ಹಾಗೂ ಲೋಕೇಷನ್ ಮಾಹಿತಿಯನ್ನು ಪೊಲೀಸರಿಂದ ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಧೈರ್ಯಶಾಲಿ ಸಾರ್ವಜನಿಕರ ಸಹಕಾರ ಬೇಕಿದೆ , ಹೀಗಾಗಿ ಅಲ್ಪಮಟ್ಟದ ಹಿನ್ನೆಡೆಯೂ ಆಗಿದೆ ಎನ್ನುತ್ತಾರೆ ಅಧಿಕಾರಿಗಳು
ಇನ್ನು ಅರಸೀಕೆರೆಯಲ್ಲಿ ಪುರಸಭೆ ಸದಸ್ಯರೊಬ್ಬರ ಪುತ್ರ ಸೇರಿದಂತೆ ಮೂವರನ್ನು ಗಾಂಜಾ ಪ್ರಕರಣದಲ್ಲಿ ಬಂಧಿಸಿ. ಐದು ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಾಸನ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಗಾಂಜಾ ಮಾರಾಟ, ಸೇವನೆ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿ ಕ್ರಮಕೈಗೊಳ್ಳಲಾಗಿದೆ.
ವಿದ್ಯಾರ್ಥಿಗಳಿಗೆ ಮಾದಕ ಪದಾರ್ಥ ಮಾ.ರಾ.ಟ, ಸೇವನೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜತೆಗೆ ಅದೇ ಕಾಲೇಜಿನ ಅಲ್ಲದೆ ಒರಿಸ್ಸಾದಿಂದ ಮೈಸೂರು ಜಿಲ್ಲೆ ಸಾಲಿಗ್ರಾಮಕ್ಕೆ ಬಂದು ಅಲ್ಲಿಂದ ಅರಕಲಗೂಡಿಗೆ ಸಾಗಣೆಯಾಗಿದ್ದ ಐದು ಕೆಜಿ ಗಾಂಜಾ ಪತ್ತೆಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ
ಗಾಂಜಾ, ಡ್ರಗ್ಸ್, ಮತ್ತು ಬರುವ ಮಾತ್ರೆ, ಚಾಕೋಲೇಟ್ ಮಾರಾಟದಂತಹ ಒಟ್ಟು 1930 ಪ್ರಕರಣವನ್ನು ಜಿಲ್ಲೆಯಲ್ಲಿ ಪತ್ತೆಹಚ್ಚಲಾಗಿದೆ.
