ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ರವರು 97,500 ಕ್ಕೂ ಹೆಚ್ಚು 4ಜಿ ಟವರ್‌ಗಳಿಗೆ ಚಾಲನೆ ನೀಡಿದ್ದು, ಶೃಂಗೇರಿ ಕ್ಷೇತ್ರದ ಖಾಂಡ್ಯ ಹೋಬಳಿಯ ಬೆಳಗೊಳ-ಬೊಗಸೆ ಟವರ್ ಉದ್ಘಾಟನೆಯೂ ಅದರಲ್ಲಿ ಒಂದಾಗಿತ್ತು.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಮ್ಮ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಪಾಲ್ಗೊಂಡಿದ್ದರು.
ಆದರೆ, ನಿರ್ಮಿತ ಟವರ್‌ನಿಂದ ಬೆಳಗೊಳ ಗ್ರಾಮಕ್ಕೆ ಸಂಪರ್ಕ ಸಿಗದಿರುವ ಕಾರಣ ಗ್ರಾಮಸ್ಥರು ಹೊಸ ಟವರ್‌ಗಾಗಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, 6 ತಿಂಗಳೊಳಗೆ ಹೊಸ ಟವರ್ ನಿರ್ಮಾಣವಾಗುವ ಭರವಸೆ ನೀಡಿದರು.
