Friday, March 27, 2026
Homeಜಿಲ್ಲಾಸುದ್ದಿಮೂಡಿಗೆರೆ : ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿಡಿಓ ಕೃಷ್ಣಪ್ಪಗೆ ಸನ್ಮಾನ

ಮೂಡಿಗೆರೆ : ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದಿಂದ ಪಿಡಿಓ ಕೃಷ್ಣಪ್ಪಗೆ ಸನ್ಮಾನ

ಮೂಡಿಗೆರೆ: ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶ್ರೀಯುತ ಕೃಷ್ಣಪ್ಪ ಅವರನ್ನು ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಬಿ.ನಿಶಾಂತ್ ಮಾತನಾಡಿ’ ಕೃಷ್ಣಪ್ಪ ಅವರು ಆರು ವರ್ಷಗಳ ಕಾಲ ಬಣಕಲ್ ನಲ್ಲಿ ಸುದೀರ್ಘ ಸೇವೆ ನೀಡಿ ಕಿರುಗುಂದ ಗ್ರಾಮಕ್ಕೆ ವರ್ಗಾವಣೆಗೊಂಡಿದ್ದಾರೆ.

ಅವರ ಸಹಕಾರ ಎಲ್ಲ ಜನರಿಗೆ ಸಿಕ್ಕಿದ್ದು ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಕಾರಣಕರ್ತರಾಗಿದ್ದು ಮುಂದೆಯೂ ಸಹ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಡಿಒ ಬಿ.ಎನ್ ಕೃಷ್ಣಪ್ಪ ಬಣಕಲ್ ನ ಜನರು ನನಗೆ ಅತ್ಯುತ್ತಮ ಸಹಕಾರ ನೀಡಿದ್ದಾರೆ.

ಜನರ ಸಹಕಾರದಿಂದ ಮಾತ್ರ ಯಾವುದೇ ಕಾರ್ಯಗಳು ಸುಸೂತ್ರವಾಗಿ ನಡೆಯಲು ಸಾಧ್ಯವಾಗಿದೆ.

ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಹಾಗೂ ಎಲ್ಲ ಸದಸ್ಯರ ಸಹಕಾರದಿಂದ ಅಬಿವೃದ್ದಿ ಕಾರ್ಯ ಮಾಡಲು ಸಾಧ್ಯವಾಗಿದೆ.

ಜನರಿಗೆ ನಾನು ಚಿರ ಋಣಿಯಾಗಿದ್ದೇನೆ.ಸಹಕಾರ ಸಂಘದವರು ನನ್ನನ್ನು ಅನಿರೀಕ್ಷಿತವಾಗಿ ಸನ್ಮಾನ ಮಾಡಿ ಬೀಳ್ಕೊಡುಗೆ ನೀಡಿರುವುದು ನನಗೆ ಸಂತೋಷ ತಂದಿದೆ.

ಸನ್ಮಾನಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ’ಎಂದರು.

ಈ ಸಂದರ್ಭದಲ್ಲಿ ಸಂಘದ ಸಿಇಒ ಜಿ.ಬಿ.ನಿಶಾಂತ್,ಪತ್ರಕರ್ತ ಅನಿಲ್ ಮೊಂತೆರೊ,ಗ್ರಾ.ಪಂ.ಕಾರ್ಯದರ್ಶಿ ಸುದೀರ್, ಮುಖಂಡರಾದ ಪ್ರತಾಪ್ ಬಂಕೇನಹಳ್ಳಿ,ಜಿ.ಬಿ.ಕಲ್ಪನಾ,ಶ್ರೀನಾಥ್,ಜಾಕೀರ್
ಹುಸೇನ್,ಟಿ.ಎಂ.ನಾಗೇಶ್,ಸುಬ್ರಾಯ,ಹರೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!