‘ಗಟ್ಟಿಮೇಳ’ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಕಮಲಶ್ರೀ ಅವರು ನಿಧನ ಹೊಂದಿದ್ದಾರೆ. ಅವರಿಗೆ ವಯಸ್ಸು 70 ವರ್ಷ ಮೇಲ್ಪಟ್ಟಿತ್ತು. ಅವರ ನಿಧನವು ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ಪತ್ತೆಧಾರಿ ಪ್ರತಿಭಾ, ಬದುಕು, ಕನಕ ಸುಮಾರ್, ಲಕ್ಷ್ಮೀ ಬಾರಮ್ಮಾ ಸೇರಿದಂತೆ ಹತ್ತು ಹಲವು ಹಿಟ್ ಸೀರಿಯಲ್ಗಳನ್ನು ಕೊಟ್ಟಿರುವ ನಟಿಗೆ ಈಗ ಬ್ರೆಸ್ಟ್ ಕ್ಯಾನ್ಸರ್ ಎನ್ನುವ ಮಹಾಮಾರಿ ಒಕ್ಕರಿಸಿದೆ. ದುಬಾರಿ ಚಿಕಿತ್ಸೆಗೆ ನಟಿಯ ಬಳಿ ಹಣವಿಲ್ಲ.
ಉಮಾಶ್ರೀ, ಗಿರಿಜಾ ಲೋಕೇಶ್ ಸೇರಿದಂತೆ ಕೆಲವು ನಟಿಯರು ಕಮಲಶ್ರೀ ಅವರಿಗೆ ಧನ ಸಹಾಯ ಮಾಡಿದ್ದರು. ಕೆಲವರು ಅಕ್ಕಿ, ಬೇಳೆಯನ್ನು ತಂದುಕೊಡುತ್ತಿದ್ದರು. ಯಾರಿಗೂ ಭಾರವಾಗಿ ಬದುಕಬಾರದು ಎನ್ನುವ ಕಾರಣದಿಂದ ಅಕ್ಕನ ಮಗಳ ಮನೆಯಿಂದ ಬಂದು ಒಂಟಿಯಾಗಿ ಜೀವನ ನಡೆಸುತ್ತಿದ್ದ ಕಮಲಶ್ರೀ.

ಕಮಲಶ್ರೀ ಅವರು ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು. ಅದರಿಂದ ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಹೀಗಾಗಿ ಕೊನೆಯುಸಿರೆಳೆದರು.
