ಚಿಕ್ಕಮಗಳೂರು: ರಾಜ್ಯದಾಂತ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆಗೆಂದು ಹೋದಂತಹ ಶಿಕ್ಷಕರಿಗೆ ತಾಂತ್ರಿಕ ದೋಷ, ಸರ್ವರ್ ಸಮಸ್ಯೆ, ಸೂಕ್ತ ಬೆಂಬಲದ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಲೇ ಇವೆ.

ಮೊನ್ನೆಯಷ್ಟೇ ಜಾತಿ ಗಣತಿಗೆಂದು ಮನೆ ಬಳಿ ಹೋದ ಶಿಕ್ಷಕಿಯ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ ಘಟನೆ ನಡೆದಿದಿತ್ತು. ಇದೀಗ ಚಿಕ್ಕಮಗಳೂರಿನ ದೋಣಿ ಕಣದಲ್ಲಿ ಸಮೀಕ್ಷೆಗೆಂದು ಬಂದ ಶಿಕ್ಷಕಿಗೆ ಮೆಸ್ಕಾಂ ಇಂಜಿನಿಯರ್ ರೂಪಾ ಮತ್ತು ಆಕೆಯ ಪತಿ ಧಮ್ಕಿ ಹಾಕಿದಂತಹ ಘಟನೆ ನಡೆದಿದೆ.

ಕೋರ್ಟ್ ಆರ್ಡರ್ ಆಗಿದ್ರೂ, ಬಲವಂತವಾಗಿ ನನ್ನ ಮಗಳ ಬಳಿ ಪ್ರಶ್ನೆ ಕೇಳಿಯಾ, ಮಕ್ಕಳತ್ರ ಬಂದು ಗಲಾಟೆ ಮಾಡ್ತಿಯಾ, ಯಾವ ಥರ್ಡ್ ಕ್ಲಾಸ್‌ಗಳೆಲ್ಲಾ ಬರ್ತಾವೆ ಅಂತ ಶಿಕ್ಷಕಿಗೆ ಅವಾಜ್ ಹಾಕಿದ್ದಾರೆ.

