Tuesday, November 24, 2026
Homeಜಿಲ್ಲಾಸುದ್ದಿMudigere: ಕಾಡಾನೆ ಹಿಂಡು ನುಗ್ಗದಂತೆ ತಡೆಯಲು ರಾತ್ರಿಯಿಡೀ ಆನೆಗಳ ಮೇಲೆ ನಿಗಾ ಇಡಲು ಮುಂದಾದ ಇಟಿಎಫ್‌...

Mudigere: ಕಾಡಾನೆ ಹಿಂಡು ನುಗ್ಗದಂತೆ ತಡೆಯಲು ರಾತ್ರಿಯಿಡೀ ಆನೆಗಳ ಮೇಲೆ ನಿಗಾ ಇಡಲು ಮುಂದಾದ ಇಟಿಎಫ್‌ ಸಿಬ್ಬಂದಿ!

Telegram Group
Join Now

ಮೂಡಿಗೆರೆ: ಹಾಸನದ ಬೇಲೂರು ಭಾಗದಿಂದ ಮೂಡಿಗೆರೆಯ ಕಡೆಗೆ ಕಾಡಾನೆ ಹಿಂಡುಗಳನ್ನು ಅಟ್ಟಿದ್ದರಿಂದ ಆ ಭಾಗದ ನೂರಾರು ಗ್ರಾಮಗಳ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದ ಗ್ರಾಮಗಳ ಕಡೆಗೆ ಆನೆ ಹಿಂಡು ನುಗ್ಗದಂತೆ ತಡೆಯಲು ಇಡೀ ರಾತ್ರಿ ಇಟಿಎಫ್‌ ಸಿಬ್ಬಂದಿ ನಿಗಾ ಇಡಲು ಮುಂದಾಗಿದ್ದಾರೆ.

ಮೂಡಿಗೆರೆಯಲ್ಲಿ ಬೇಲೂರಿನ ಆನೆಗಳ ಆಪರೇಷನ್ ಗಜ ಕಾರ್ಯಚರಣೆ ಸ್ಥಗಿತಗೊಳಿಸಲಾಗಿದೆ. ಮೂಡಿಗೆರೆ ತಾಲೂಕಿನ ಬಾರದ ಹಳ್ಳಿಯಲ್ಲಿ 17 ಕಾಡಾನೆಗಳು ಬೀಡುಬಿಟ್ಟಿವೆ. 2 ತಂಡಗಳಾಗಿ 38ಕ್ಕೂ ಅಧಿಕ ಕಾಡಾನೆಗಳು ವಿಂಗಡಣೆಯಾಗಿವೆ. ಕಾಡಾನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ನೂರಾರು ಇಟಿಎಫ್ ಸಿಬ್ಬಂದಿ ಇಡೀ ರಾತ್ರಿ ಕಾಡಾನೆಗಳ ಮೇಲೆ ನಿಗಾ ಇಡಲಿದ್ದಾರೆ.

ಡ್ರೋನ್ ಕ್ಯಾಮೆರಾದಲ್ಲಿ ಕಾಡಾನೆಗಳ ಹಿಂಡಿನ ಸಂಚಾರ ಸೆರೆಯಾಗಿದೆ. ಕತ್ತಲಾಗುತ್ತಿದ್ದಂತೆ ಕಾಡಾನೆಗಳ ಹಿಂಡು ಸಂಚಾರ ಆರಂಭಿಸಿವೆ. ಆನೆಗಳ ಸ್ವಾಭಾವಿಕ ನಡೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ. ಕಾಡಾನೆಗಳ ಹಿಂಡಿನ ಹಿಂದೆ-ಮುಂದೆ ಇಟಿಎಫ್‌ ಸಿಬ್ಬಂದಿ ಅಲರ್ಟ್‌ ಆಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!