Tuesday, November 24, 2026
Homeಜಿಲ್ಲಾಸುದ್ದಿಮಲೆನಾಡಲ್ಲಿ ಹೆಚ್ಚಿದ ಕಾಡು ಪ್ರಾಣಿಗಳ ಹಾವಳಿ: ಕಾಡುಕೋಣಗಳ ದಿಢೀರ್‌ ಎಂಟ್ರಿ, ಜನರಿಗೆ ಪೀಕಲಾಟ!

ಮಲೆನಾಡಲ್ಲಿ ಹೆಚ್ಚಿದ ಕಾಡು ಪ್ರಾಣಿಗಳ ಹಾವಳಿ: ಕಾಡುಕೋಣಗಳ ದಿಢೀರ್‌ ಎಂಟ್ರಿ, ಜನರಿಗೆ ಪೀಕಲಾಟ!

Telegram Group
Join Now

ಚಿಕ್ಕಮಗಳೂರು : ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಜನ ಆತಂಕದಲ್ಲೇ ಬದುಕುವಂತಾಗಿದೆ. ಒಂದೆಡೆ ಆನೆಗಳ ಭೀತಿ, ಮತ್ತೊಂದೆಡೆ ಕಾಡು ಕೋಣಗಳ ಕಾಟಕ್ಕೆ ಜನರು ಭೀತಿಗೆ ಒಳಗಾಗಿದ್ದಾರೆ.

ತಾಲೂಕಿನ ಅರೆನೂರು, ಹಕ್ಕಿಮಕ್ಕಿ ಗ್ರಾಮದ ಬಳಿ ಎರಡು ಕಾಡುಕೋಣಗಳು ಸವಾರರಿಗೆ ಎದುರಾಗಿದ್ದು, ರಸ್ತೆ ಬದಿ ನಿಂತು ವಾಹನ ಸಂಚಾರಕ್ಕೆ ಕೊಂಚ ಅಡಚಣೆ ಉಂಟು ಮಾಡಿದ್ವು. ಗೂಡ್ಸ್ ವಾಹನದ ಚಾಲಕ ಪಾಸ್‌ ಆಗಲು ಮುಂದಾಗ್ತಿದ್ದಂತೆ ಕೋಣಗಳೆರಡು ಅಡ್ಡ ಬಂದು ರಸ್ತೆ ದಾಟಿದ್ವು. ಆಲ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾಡುಕೋಣಗಳು ಎಲ್ಲೆಂದರಲ್ಲಿ ಕಾಣಿಸಿಕೊಳ್ತಿದ್ದು, ಬೇರೆ ಕಡೆ ಅಟ್ಟಿ ಆತಂಕ ದೂರ ಮಾಡಿ ಅನ್ನೋದು ಜನಾಗ್ರಹವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!