ಚಿಕ್ಕಮಗಳೂರು: ಕಾಫಿನಾಡು ಮಲೆನಾಡು ಭಾಗಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ಮಾನವ ಸಂಘರ್ಷ ನಡೆದಿದ್ದು ಗೊತ್ತೇ ಇದೆ. ಅದೇ ರೀತಿ ರೈತರ ತೋಟಗಳು, ಕಾಫಿ ಎಸ್ಟೇಟ್ ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆ, ಕಾಡುಕೋಣಗಳ ಸಂಚಾರ ಜನರನ್ನು ತೀವ್ರ ಸಂಕಷ್ಟಕ್ಕೆ ಗುರಿಮಾಡಿದೆ.
ಹೌದು .. ಈಗ ಕಾಡಾನೆ, ಕಾಡುಕೋಣಗಳ ಕಾಟದ ನಂತರ ಚಿರತೆಗಳನ್ನ ನಾವು ಇಲ್ಲಿ ಕಾಣಬಹುದು. ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಮೂರು ಚಿರತೆಗಳು ಒಂದೇ ಸಮಯದಲ್ಲಿ ಮೂರು ದಿಕ್ಕುಗಳಲ್ಲಿ ಮುಖ ಮಾಡಿಕೊಂಡು ಮರದ ಮೇಲೆ ಕುಳಿತಿರುವುದನ್ನು ಗಮನಿಸಬಹುದು.
ಈ ದೃಶ್ಯವು ಕಾಫಿನಾಡಿನ ಅರಣ್ಯ ಸಂಪತ್ತು ಮತ್ತು ವನ್ಯಜೀವಿ ವೈವಿದ್ಯತೆಗೆ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು. ಮುತ್ತೋಡಿ ಅಭಯಾರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದ್ದರು ಮೂರು ಚಿರತೆಗಳು ಮೂರು ದಿಕ್ಕಿಗಳಾಗಿ ಕುಳಿತಿದ್ದು ಮಾತ್ರ ದೃಶ್ಯ ಮನೋಹರವಾಗಿತ್ತು.
