Tuesday, February 10, 2026
Homeಜಿಲ್ಲಾಸುದ್ದಿಸಕಲೇಶಪುರ: ಇಬ್ಬರ ಬಾಲಕರ ದುರ್ಮರಣ: ಮೃತರ ಮನೆಗೆ ಶಾಸಕ ಸಿಮೆಂಟ್‌ ಮಂಜು ಭೇಟಿ, ಪರಿಹಾರ ವಿತರಣೆ!

ಸಕಲೇಶಪುರ: ಇಬ್ಬರ ಬಾಲಕರ ದುರ್ಮರಣ: ಮೃತರ ಮನೆಗೆ ಶಾಸಕ ಸಿಮೆಂಟ್‌ ಮಂಜು ಭೇಟಿ, ಪರಿಹಾರ ವಿತರಣೆ!

ಸಕಲೇಶಪುರ: ಹೊಸೂರಿನ ಐ.ಬಿ.ಸಿ ಎಸ್ಟೇಟ್‌ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ನೀರಿನ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳು ದುರ್ಮರಣ ಹೊಂದಿದ್ದು ಮೃತರ ಮನೆಗಳಿಗೆ ಶಾಸಕ ಸಿಮೆಂಟ್‌ ಮಂಜು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ವೈಯಕ್ತಿಕವಾಗಿ ಪರಿಹಾರ ನೀಡಿ, ಈ ಘಟನೆಯ ಕುರಿತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡುವ ವಿಶ್ವಾಸವನ್ನು ತುಂಬಿದರು.

ಸಕಲೇಶಪುರ ತಾಲೂಕು ಹಲಸುಲಿಗೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಹೊಸೂರಿನ ಐ.ಬಿ.ಸಿ ಎಸ್ಟೇಟ್‌ ನಲ್ಲಿ ಆಟ ಆಡುವಾಗ ಆಕಸ್ಮಿಕವಾಗಿ ಹೊಂಡದ ನೀರಿಗೆ ಬಿದ್ದು ಎಸ್ಟೇಟಿನ ಕಾರ್ಮಿಕರಾದ ಕೃಷ್ಣ ರವರ ಮಗನಾದ ಪ್ರಣಯ್ (7 ವರ್ಷ) ಮತ್ತು ಪ್ರಶಾಂತ್ ರವರ ಮಗನಾದ ನಿಶಾಂತ್ (5 ವರ್ಷ) ದುರ್ಮರಣ ಹೊಂದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!