Sunday, August 9, 2026
Homeಕ್ರೈಮ್ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್‌ ಖಾತೆ: ಸಾರ್ವಜನಿಕರಿಗೆ ಎಚ್ಚರಿಕೆ!

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್‌ ಖಾತೆ: ಸಾರ್ವಜನಿಕರಿಗೆ ಎಚ್ಚರಿಕೆ!

Telegram Group
Join Now

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಹ್ಯಾಕರ್‌ಗಳು ಮತ್ತು ವಂಚಕರು ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಮುಖರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರನ್ನು ವಂಚಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಇದೇ ಮಾದರಿಯಲ್ಲಿ, ಈಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರ ಹೆಸರಿನಲ್ಲಿಯೂ ನಕಲಿ ವಾಟ್ಸಪ್ ಖಾತೆ ತೆರೆದು ವಂಚಿಸಲು ಯತ್ನಿಸುತ್ತಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರು ಥೈಲ್ಯಾಂಡ್ ದೇಶದ ಕಂಟ್ರಿ ಕೋಡ್ ಹೊಂದಿರುವ +66 650318692 ಎಂಬ ನಂಬರ್‌ನಿಂದ ವಾಟ್ಸಪ್ ಬಿಸಿನೆಸ್ ಖಾತೆಯನ್ನು ಸೃಷ್ಟಿಸಿದ್ದಾರೆ.

ಅದಕ್ಕೆ ‘ಡೆಪ್ಯುಟಿ ಕಮಿಷನರ್ ಅಂಡ್ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್’ ಎಂದು ಶೀರ್ಷಿಕೆ ನೀಡಿ, ಜಿಲ್ಲಾಧಿಕಾರಿಗಳ ಅಧಿಕೃತ ಭಾವಚಿತ್ರವನ್ನು ಪ್ರೊಫೈಲ್ ಚಿತ್ರವನ್ನಾಗಿ ಬಳಸಿಕೊಂಡಿದ್ದಾರೆ. ಈ ನಕಲಿ ಖಾತೆಯಿಂದ ವಿವಿಧ ಜನರಿಗೆ ‘ಹೇಗಿದ್ದೀರಿ?’, ‘ಪ್ರಸ್ತುತ ಎಲ್ಲಿದ್ದೀರಿ?’ ಎಂದು ಮೆಸೇಜ್‌ಗಳನ್ನು ಕಳುಹಿಸಿ ಸಂಭಾಷಣೆ ಬೆಳೆಸಲು ಮತ್ತು ನಂಬಿಕೆ ಹುಟ್ಟಿಸಿ ಹಣ ಪಡೆದು ಮೋಸ ಮಾಡಲು ಯತ್ನಿಸಲಾಗುತ್ತಿದೆ.

ಇದು “ಇಂಪರ್ಸನೇಷನ್ ಸ್ಮಾಮ್’ (Impersonation Scam) ಆಗಿದ್ದು, ಈ ನಂಬರ್‌ನಿಂದ ಬರುವ ಯಾವುದೇ ಮೆಸೇಜ್ ಅಥವಾ ಕರೆಗಳಿಗೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಪ್ರತಿಕ್ರಿಯಿಸದೇ ಅಥವಾ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಬಾರದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments