Friday, August 14, 2026
Homeಜಿಲ್ಲಾಸುದ್ದಿಮೂಡಿಗೆರೆ: ಸಿಜೆಐ ಮೇಲೆ ಅಗೌರವ ತೋರಿದ ವಕೀಲ: ಕ್ರಮ ಕೈಗೊಳ್ಳಲು BSP ಆಗ್ರಹ

ಮೂಡಿಗೆರೆ: ಸಿಜೆಐ ಮೇಲೆ ಅಗೌರವ ತೋರಿದ ವಕೀಲ: ಕ್ರಮ ಕೈಗೊಳ್ಳಲು BSP ಆಗ್ರಹ

Telegram Group
Join Now

ಮೂಡಿಗೆರೆ: ಘನವೆತ್ತ ಸುಪ್ರೀಂಕೋರ್ಟ್ ನ್ಯಾಯಧೀಶ ಗವಾಯಿ ಅವರಿಗೆ ಅಗೌರವ ತೋರಿದ ವಕೀಲ ರಾಕೇಶ್ ವಿರುದ್ದ ಕ್ರಮ ಕೈಗೊಳ್ಳುವಂತೆ ಬಹುಜನ ಸಮಾಜ ಪಕ್ಷ ಮೂಡಿಗೆರೆ ಕಾರ್ಯಕರ್ತರು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಅಧ್ಯಕ್ಷ ರಮೇಶ್ ಲೋಕುವಳ್ಳಿ ಮಾತನಾಡಿ ನ್ಯಾಯ ದೀಶರ ಮೇಲೆ ಅಗೌರವ ಖಂಡನೀಯ. ಪಾದರಕ್ಷೆ ಎಸೆದ ವಕೀಲ ರಾಕೇಶ್ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನ್ಯಾಯಮೂರ್ತಿಗಳನ್ನು ಅವಮಾನಿಸಿ, ಸನಾತನ ಧರ್ಮದ ಮೇಲಿನ ಅವಮಾನವನ್ನು ಸಹಿಸುವುದಿಲ್ಲ ಎಂದು ಕಿರುಚಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ನ್ಯಾಯಾಂಗ ಹಾಗೂ ಸಂವಿಧಾನ ಮೇಲೆ ನಡೆದ ನೇರ ದಾಳಿ ಇದಾಗಿದೆ ಎಂದರು

ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಝಕೀರ್ ಹುಸೇನ್ ಮಾತನಾಡಿ ವಕೀಲನ ಕ್ರೂರ ವರ್ತನೆ ಇಡೀ ಸಮಾಜಕ್ಕೆ ಹಾಗೂ ವಕೀಲ ವೃತ್ತಿ ಮಾರಕ ವಾಗಿದ್ದು ಇಂತಹ ವಕೀಲನನ್ನು ಕೂಡಲೇ ಕಿತ್ತೊಗೆಯಬೇಕು.
ಸ್ವತಂತ್ರ ಬಂದು 78 ವರ್ಷ ಕಳೆದರು ಭಾರತದಲ್ಲಿ ಕೆಲ ವರ್ಗದ ಮನಸ್ಥಿತಿ ಬದಲಾಗಿಲ್ಲ ಎಂಬುದಕ್ಕೆ ಇದು ಒಂದು ಪ್ರಮುಖ ಉದಾಹರಣೆ ಎಂದರು.

ಇಂತಹ ಘಟನೆಗಳು ಮರುಕಳಿಸಬಾರದೆಂದರೆ ಭಾರತೀಯ ನಾಗರೀಕ ಬಂಧುಗಳೇ ಲ್ಲ ಒಗ್ಗಟ್ಟಿನಲ್ಲಿ ಖಂಡಿಸಬೇಕು ಎಂದರು ಶತಮಾನದ ಆಚರಣೆ ಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಾಚಿಕೆಯಾಗಬೇಕು ಎಂದರು

ಈ ಸಂದರ್ಭದಲ್ಲಿ ಮಲೆನಾಡು ಮುಸ್ಲಿಂ ಸಂಘಟನೆ ಅಧ್ಯಕ್ಷ ಅಬ್ರಾಕ್ ಅಹಮದ್, ತಾಲೂಕು ಮುಖಂಡ ಹಮೀದ್, ಬೆಟ್ಟಗೆರೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್, ಸಮಾಜ ಸೇವಕ ಫಿಶ್ ಮೋಣು, ಕ್ಷೇತ್ರ ಸಮಿತಿ ಮುಖಂಡ ವಸಂತ್ ಚೆಂಡಗೂಡು, ಉಪಾಧ್ಯಕ್ಷ ಹೊನ್ನೇಶ್,ಮುಖಂಡ ಲಕ್ಷ್ಮಣ್ ದೊಡ್ಡಯ್ಯ ಸೇರಿದಂತೆ ಅನೇಕರು ಇದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments