ಮೂಡಿಗೆರೆ: ಅಕ್ರಮವಾಗಿ ಸಾಗುವಾನಿ ನಾಟಾ ಸಾಗಾಣಿಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮೂಡಿಗೆರೆ ಯ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
ಹೌದು .. ಅಕ್ಟೋಬರ್ 7 ರಂದು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮೂಡಿಗೆರೆ ಪ್ರಾದೇಶಿಕ ಅರಣ್ಯ ವಲಯದ ಭಾರತಿಬೈಲು ಶಾಖೆ ವ್ಯಾಪ್ತಿಯಲ್ಲಿ ಮಾರುತಿ ಓಮ್ನಿ KA-05-P-8904 ವಾಹನದಲ್ಲಿ ಅಕ್ರಮ ಸಾಗುವಾನಿ ನಾಟಾ ಸಾಗಣಿಕೆ ಮಾಡುತ್ತಿದ್ದಾಗ ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ.
ಮೂವರು ಆರೋಪಿಗಳನ್ನ ಬಂಧಿಸಿ ಮಾರುತಿ ಓಮ್ನಿ ಹಾಗೂ 5 ಸಾಗುವಾನಿ ರುಂಡುಗಳನ್ನ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಕರ್ಷ್ ನೇತೃತ್ವದಲ್ಲಿ ಮಂಜುನಾಥ್, ಸುಹಾಸ್ ಲಕ್ಷ್ಮಣ್ ಮತ್ತು ರಘು ಅವರ ಸಹಾಯದಿಂದ ಈ ಕಾರ್ಯಚರಣೆ ನಡೆಸಲಾಗಿದೆ.
ಹಾಗೆ ಇವರದ್ದು ದೊಡ್ಡ ಗ್ಯಾಂಗ್ ಇದ್ದು ಅರಣ್ಯ ಇಲಾಖೆ ಬೇಧಿಸಲೇಬೇಕಾಗಿದ್ದು 350 ಕ್ಕೂ ಹೆಚ್ಚು ಮರಗಳ ಕದ್ದಿರುವ ಆರೋಪ ಸ್ಥಳೀಯನೊಬ್ಬನ ಸಹಕಾರ ಹುಲಿ ಉಗುರು ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿ ಆ ನಂತರ ಖದೀಮರು ಮಾರಕಾಸ್ತ್ರ ಬಳಕೆ ಮಾಡುತ್ತಿರುವುದು ಅದರ ಜೊತೆ ಗ್ರಾಮಸ್ಥರ ಮೇಲೆ ಹಲ್ಲೆ ಕಾಡು ಪ್ರಾಣಿಗಳ ಬೇಟೆ ಹುಲಿ ಚರ್ಮ ಮಾರಾಟ ಪ್ರಯತ್ನ ಬಂದೂಕು ತೋರಿಸಿ ಬೆದರಿಕೆ ಹೀಗೆ ಈ ಮೂವರ ವಿರುದ್ಧ ಸಾರ್ವಜನಿಕರು ಆರೋಪಗಳ ಸುರಿಮಳೆಗೈದಿದ್ದಾರೆ.
