Monday, February 9, 2026
Homeಜಿಲ್ಲಾಸುದ್ದಿಶೃಂಗೇರಿ: ಟಿ.ಡಿ.ರಾಜೇಗೌಡ & ಜೀವರಾಜ್ ನಡುವೆ ಜಟಾಪಟಿ: ಮುಂದಿನ ದಿನಗಳಲ್ಲಿ ನಡೆಯೋದೇನು?

ಶೃಂಗೇರಿ: ಟಿ.ಡಿ.ರಾಜೇಗೌಡ & ಜೀವರಾಜ್ ನಡುವೆ ಜಟಾಪಟಿ: ಮುಂದಿನ ದಿನಗಳಲ್ಲಿ ನಡೆಯೋದೇನು?

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್ ಮಧ್ಯೆ ಭಾರಿ ಲಡಾಯಿ ನಡೆಯುತ್ತಿದೆ.

ಮಲೆನಾಡಿನ ರಾಜಕಾರಣ ಬಯಲು ಸೀಮೆ ರಾಜಕಾರಣಕ್ಕಿಂತ ಹೆಚ್ಚು ರಂಗು ಪಡೆಯುತ್ತಿದೆ.ದಿನವೂ ಒಂದಲ್ಲ ಒಂದು ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ.ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಲುಪಿದೆ.

ಅನ್ಯಾಯದ ಪರಮಾವಧಿ ತಲುಪಿರುವ ಸ್ಥಿತಿಗೆ ಶೃಂಗೇರಿ ಕ್ಷೇತ್ರದ ರಾಜಕಾರಣ ತಲುಪಿದೆ. ದಿನನಿತ್ಯ ಶಾಸಕ ರಾಜೇಗೌಡರ ಮಧ್ಯೆ ಆರೋಪ ಪ್ರತಿ ಆರೋಪಗಳು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿವೆ.

ರಾಜೇಗೌಡ ಭ್ರಷ್ಟ ಅಲ್ಲ ಆದರೆ ಮೊದಲಿನ ಚಟುವಟಿಕೆ ಇಲ್ಲ ಆದರೂ ಭ್ರಷ್ಟಾಚಾರದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿದೆ.ಇದಕ್ಕೆ ಜೀವರಾಜ್ ಕಾರಣ ಎಂದು ಕಾಂಗ್ರೆಸ್ ನವರ ಆರೋಪ.

ಆದಾಯ ಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ ಇದರ ಹಿಂದೆ ಸೋತಿರುವ ಜೇವರಾಜ್ ಬುಸುಗುಟ್ಟುತ್ತಿದ್ದಾರೆ.ಇದರ ಫಲವೇ ಹಾದಿ ಬೀದಿಯಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತಿ ಆರೋಪ ಮಾಡುತ್ತಿದ್ದಾರೆ.ಹಲ್ಲಿಲ್ಲದ ಹಾವು ಕಚ್ಚಲು ಸಾಧ್ಯವಿಲ್ಲ.ಆದರೆ ಸದಾ ಪ್ರಚಾರವೋ ಅಪಪ್ರಚಾರವೋ ನಡೆಯುತ್ತಿದೆ.

ಶಾಸಕ ರಾಜೇಗೌಡರ ಮೇಲೆ ದಿನಕ್ಕೊಂದು ದೂರು ಹೇಳುವುದೆ ಜೀವರಾಜ್ ಮತ್ತು ಬಿಜೆಪಿಯವರ ಕೆಲಸ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆದಾಯಕ್ಕಿಂತ ಹೆಚ್ಚಿನ ಆದಾಯ ಇದೆ ಎಂದು ಬಿಜೆಪಿಯ ದಿನೇಶ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ನೀಡಿದ್ದು ಜೀವರಾಜ್ ಮಾಧ್ಯಮಗಳ ಮುಂದೆ ಆರಚಿಕೊಳ್ಳುತ್ತಿದ್ದಾರೆ.ಇದಕ್ಕೆ ಶಾಸಕ ರಾಜೇಗೌಡ ಕೂಡ ಕೆಂಡ ಮಂಡಲರಾಗಿದ್ದಾರೆ. ಜನರು ಕೂಡ ಪುಕ್ಕಟ್ಟೆ ಮಜಾ ತೆಗೆದುಕೊಳ್ಳುತ್ತಿದ್ದಾರೆ.

ಬಯಲು ಪ್ರದೇಶ ರಾಜಕಾರಣ ತಣ್ಣಗಾಗಿದೆ ಮಲೆನಾಡಿನಲ್ಲಿ ಬೆಂಕಿ ರಾಜಕಾರಣ ದಿನವೂ ಲಡಾಯಿ ನೋಡಿ ನಗಾಡುತ್ತಿದ್ದು ಮುಂದಿನ ಚುನಾವಣೆವರೆಗೂ ಇದು ಇದ್ದೆ ಇರುತ್ತದೆ ಎಂದು ಜನ ನಗುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!