Tuesday, August 11, 2026
Homeಜಿಲ್ಲಾಸುದ್ದಿDurga Charan: ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ

Durga Charan: ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ

Telegram Group
Join Now

ಕೊಪ್ಪ: ಇನ್ನೂ ನಾವು ಭಾರತೀಯರು ಅಂತ ಹೇಳಿಕೊಳ್ಳಲು ಪಾಸ್ ಪೋರ್ಟ್, ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಗ್ಯಾಸ್ ಬಿಲ್,ಕರೆಂಟ್ ಬಿಲ್, ಡ್ರೈವಿಂಗ್ ಲೈಸೆನ್ಸ್ ಇದ್ಯಾವ ದಾಖಲೆಗಳು ಬೇಕಾಗಿಲ್ಲ.
ಬಿಜೆಪಿ ಪಕ್ಷದ ಬೆಂಬಲಿಗರು ಮತ್ತು ಸದಸ್ಯರುಗಳು ಮಾತ್ರ ಭಾರತದ ಪ್ರಜೆಗಳು‌ ಗೊತ್ತಾಯ್ತಾ..??
ಪ್ರಶ್ನೆ ಮಾಡಿದ್ರೆ ಹುಷಾರ್ ಪಾಕಿಸ್ತಾನಿ ಏಜೆಂಟ್ ಸಾಬ್ರಿಗೆ ಹುಟ್ಟಿದವ ದೇಶದ್ರೋಹಿ ತುಕುಡೇ ಗ್ಯಾಂಗ್ ಅರ್ಬನ್ ನಕ್ಸಲಿಗ ಜೋಕೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ದುರ್ಗಾ ಚರಣ್.

ಎಂತ ವ್ಯವಸ್ಥೆ ಇದು ನಾವು ಇಷ್ಟು ದಿನ ನಾನು ಭಾರತೀಯ ಎನ್ನಲು ಪಾಸ್ ಪೋರ್ಟ್, ಆಧಾರ್ ಕಾರ್ಡ್, ಓಟರ್ ಐಡಿ ಮುಂತಾದವುಗಳೇ ದಾಖಲೆ ಅಂತ ನಂಬಿಕೊಂಡು ಇದ್ವಿ ಈಗ ನೋಡಿದ್ರೆ ಇವೆಲ್ಲ ಪೌರತ್ವವೇ ಅಲ್ಲ ಅಂತಿರೋದು ನೋಡಿದಾಗ ಮನಸ್ಸಿಗೆ ಬಹಳ ಬೇಜಾರಾಗುತ್ತೆ, ಹಾಗಾದ್ರೆ ಪೌರತ್ವಕ್ಕೆ ಯಾವ ದಾಖಲೆಗಳನ್ನು ಒದಗಿಸಬೇಕು ಎಂಬುದನ್ನು ಕೇಂದ್ರ ಸರ್ಕಾರ ತಿಳಿಸಲಿ ಜನರಿಗೆ ಉಂಟಾಗಿರುವ ಗೊಂದಲ ಮೊದಲು ಬಗೆಹರಿಸಲಿ ಎಂದು ಪತ್ರಿಕೆಗೆ ತಿಳಿಸಿದ್ದಾರೆ.

ಈ ದೇಶದ ಪೌರತ್ವ ಅಂದರೆ ಬಿಜೆಪಿನ? ನೀವು ನವಭಾರತ ಸೃಷ್ಟಿಮಾಡುತ್ತಿರುವುದು ಯಾರಿಗಾಗಿ ಬಿಜೆಪಿಗರಿಗಾಗಿ ಮಾತ್ರನ? ಇದು ನಮ್ಮ ದೇಶ ನಮ್ಮಲ್ಲಿ ಇರುವ ಎಲ್ಲಾ ದಾಖಲೆಗಳು ಈ ನೆಲದ್ದೆ ನೀವು ಹೊಸದಾಗಿ ಸೃಷ್ಟಿ ಮಾಡುವ ಯಾವ ಅಗತ್ಯವೂ ಇಲ್ಲ. ದೇಶದ ಏಳಿಗೆಗಾಗಿ ಏನಾದರು ಮಾಡಿ ಪರವಾಗಿಲ್ಲ ಆದರೆ ದೇಶವನ್ನು ಒಡೆಯುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ಅವರು ಕಿಡಿಕಾರಿದ್ದಾರೆ.

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments