ಮೂಡಿಗೆರೆ: ತಾಲೂಕಿನ ಬಾಳೂರು ಹೋಬಳಿ ಶ್ರೀ ವಿದ್ಯಾಗಣಪತಿ ಜಾವಳಿ ಹೇಮಾವತಿ ನದಿಮೂಲದಲ್ಲಿ ಇಂದು ಹಸಿರು ಫೌಂಡೇಷನ್ ವತಿಯಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಹಸಿರು ಫೌಂಡೇಷನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ ಕೋಟ್ಯಾಂತರ ಜೀವ ಸಂಕುಲದ ಜೀವನಾಡಿ ಹೇಮಾವತಿ ನದಿ ಮೂಲದಲ್ಲಿ ಸಸಿ ನೆಡುವುದು ನಮ್ಮ ಸಾರ್ಥಕತೆಯಾಗಿದೆ ಹಾಗೆ ಪ್ರಕೃತಿ ಉಳಿಸಿವುದು ನಮ್ಮ ಕರ್ತವ್ಯವಾಗಿದೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾವಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಪ್ರದೀಪ್ ಹಸಿರು ಫೌಂಡೇಷನ್ ಸಂಸ್ಥೆಯವರು ನಮ್ಮ ಗ್ರಾಮಕ್ಕೆ ಗಿಡ ನೆಡಲು ಬಂದಿರುವುದು ನಿಜಕ್ಕೂ ಸಂತೋಷವಾಗಿದೆ
ನಿರಂತರವಾಗಿ ನಿಮ್ಮ ಕಾರ್ಯಕ್ರಮಗಳು ನಡೆಯಲಿ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದರು
ಜಾವಳಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮನೋಹರ್ ಜಾವಳಿ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನೆರವೇರಿಸಿದರು.
ಈ, ಕಾರ್ಯಕ್ರಮದಲ್ಲಿ ಮಾಜಿ ಮಂಡಲ ಪಂಚಾಯತ್ ಪ್ರಧಾನರು ಚೆನ್ನಕೇಶವ ಗೌಡ.ಪರೀಕ್ಷಿತ್ ಜಾವಳಿ, ಅಭಿಷೇಕ್ ಜಾವಳಿ, ಸಂದೀಪ್, ಕೃಷ್ಣಪ್ಪ, ಜಗದೀಶ ಯಮುನಮ್ಮ, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು, ನಿರ್ದೇಶಕರಾದ ಪ್ರದೀಪ್ ಊರುಬಗೆ, ಸಚಿನ್ ದುರ್ಗದಹಳ್ಳಿ ಮಂಗಳೂರು ಕೆ ಎಂ ಸಿ ಟೀಮ್ ಸೇರಿದಂತೆ ಮತ್ತಿತರರು ಹಾಜರಿದ್ದರು..
