ಶೃಂಗೇರಿ: ಜ್ಞಾನ ವಿಜ್ಞಾನ ಸೃಜನಶೀಲ ದಿನಾಚರಣೆಯನ್ನು ಶ್ರೀರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆ ತ್ಯಾಗರಾಜನಗರದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಡಾ.ಬಿ ಶಿವಶಂಕರ್ (ಶೃಂಗೇರಿ ಶಿವಣ್ಣ) ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ರಾಮಕೃಷ್ಣ ವಿದ್ಯಾಶ್ರಮದ ಟ್ರಸ್ಟ್ ಸಂಚಾಲಕರಾದ ಅರುಣ್ ಕೆ ಎಚ್ ರವರು ಪ್ರಾಸ್ತಾವಿಕ ನುಡಿಯೊಂದಿಗೆ ವಿದ್ಯಾರ್ಥಿಗಳಿಗೆ ಇರುವ ಪಾಠದ ಅಂಶಗಳನ್ನು ಪ್ರಾಯೋಗಿಕವಾಗಿ ಕಲಿಯಲು ಜ್ಞಾನ ವಿಜ್ಞಾನ ಸೃಜನಶೀಲ ದಿನಾಚರಣೆಯನ್ನು ಮಾಡಲಾಗುತ್ತದೆ. ಪಾಠದ ಜೊತೆಗೆ ಪ್ರಯೋಗಾತ್ಮಕವಾಗಿ ವಿದ್ಯಾರ್ಥಿಗಳು ಅಭ್ಯಾಸ ಇದ್ದರೆ ಆ ವಿದ್ಯಾರ್ಥಿಗಳಿಗೆ ಮನಮುಟ್ಟುತ್ತದೆ ಹಾಗಾಗಿ ಈ ವಿಜ್ಞಾನ ದಿನಾಚರಣೆಯನ್ನು ನಡೆಸಲಾಗುತ್ತದೆ ಎಂದು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು.

ವಿಜ್ಞಾನ ಎಂಬುದು ನಮ್ಮ ಸಂಸ್ಕೃತಿಯಲ್ಲಿ ಬೆರೆತಿದೆ ಪ್ರತಿಯೊಂದು ವಿದ್ಯಾರ್ಥಿಯು ಕ್ರಿಯಾತ್ಮಕ ಶೈಲಿಯಿಂದ ನಾವಿನ್ಯತೆಯಿಂದ ಕೂಡಿದ ವಿಜ್ಞಾನದ ಮಾದರಿಗಳನ್ನು ಮಾಡಿದ್ದಾರೆ ಬರೀ ಪಾಠದಿಂದ ಮಕ್ಕಳಿಗೆ ಶಿಕ್ಷಣವಲ್ಲ ಶಿಕ್ಷಣವು ಪ್ರಯೋಗಾತ್ಮಕವಾಗಿ ಸಿಗಬೇಕು ಅಂತ ಶಿಕ್ಷಣವನ್ನ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಹೊಂದಿದ್ದಾರೆ ಈಗಿನ ಶಿಕ್ಷಣದ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಬರಿ ಅಂಕಗಳಿಕೆಯ ಒತ್ತಡವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದ್ದಾರೆ ಆದರೆ ಈ ಶಾಲೆಯಲ್ಲಿ ವಿಭಿನ್ನ ರೀತಿಯ ಪ್ರಯೋಗಾತ್ಮಕ ಶಿಕ್ಷಣವನ್ನು ಜೊತೆಗೆ ಆಧುನಿಕ ಬದುಕಿಗೆ ಬೇಕಾದ ನೈತಿಕ ಮೌಲ್ಯಗಳ ಶಿಕ್ಷಣವನ್ನ ನೀಡುತ್ತಿದ್ದಾರೆ ಎಂದು ಮನದಾಳದ ಮಾತುಗಳನ್ನು ಆಡಿದರು.

ಹಾಗೆಯೇ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವರಲಕ್ಷ್ಮಿ ಜಿ ಅವರು ಕಾರ್ಯಕ್ರಮವನ್ನು ಆಯೋಜಿಸಿರುವುದು ಒಂದು ಪ್ರಾಯೋಗಾತ್ಮಕ ಕಲಿಕೆಗೆ ಸಾಕ್ಷಿಯಾಗಿದೆ ಹಾಗೆಯೇ ಮಕ್ಕಳ ಬೌದ್ಧಿಕಮಟ್ಟ ಹಾಗೂ ಕ್ರಿಯಾತ್ಮಕ ಮನೋಭಾವಕ್ಕೆ ಪೋಷಕರನ್ನು ಶಿಕ್ಷಕರನ್ನು ಸಹಕರಿಸಿರುವ ರೀತಿಯನ್ನು ಸ್ಮರಿಸಿದರು
ಅದೇ ರೀತಿ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಸುಬ್ರಹ್ಮಣ್ಯ ಎ ವಿ ಅಂಬಲಮನೆರವರು ಈ ಕಾರ್ಯಕ್ರಮದ ರೂಪರೇಷೆ ಹಾಗೂ ಪೋಷಕರ ಶ್ರಮ ವಿದ್ಯಾರ್ಥಿಗಳ ಶ್ರಮ ಶಿಕ್ಷಕರ ಶ್ರಮವನ್ನ ಸ್ಮರಿಸುತ್ತಾ ಯಾವ ಕಾರ್ಯಕ್ರಮವು ಸುಮ್ಮನೆ ನಡೆಯುವುದಿಲ್ಲ ಪ್ರತಿ ಕಾರ್ಯದಲ್ಲಿ ಒಂದಲ್ಲ ಒಂದು ಮೌಲ್ಯಗಳು ಇರುತ್ತವೆ ಅದು ವಿದ್ಯಾರ್ಥಿ ಜೀವನದಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು ಈ ಕಾರ್ಯಕ್ರಮದ ಮತ್ತೋರ್ವ ಸದಸ್ಯರಾದ ರಾಮೇಶ್ವರರಾವ್ ರವರು ವಿದ್ಯಾರ್ಥಿಗಳ ಕ್ರಿಯಾತ್ಮಕ ಮನೋಭಾವ ಎದ್ದು ಕಾಣುತ್ತದೆ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೇ ನೈಪುಣ್ಯತೆಯಿಂದ ಮಾದರಿಗಳನ್ನು ಮಾಡಿದ್ದಾರೆ ಅವರೆಲ್ಲರಿಗೂ ಶುಭವಾಗಲಿ ಎಂಬುದನ್ನ ತಿಳಿಸಿದರು.
ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಯಾದ ಶೋಭಾ ಆರ್ ವೆಂಕಟರಮಣ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಆದಂತಹ ಸಾಮರ್ಥ್ಯವಿರುತ್ತದೆ ಆ ವಿದ್ಯಾರ್ಥಿಗಳಿರುವ ಸಾಮರ್ಥ್ಯವನ್ನು ಹುಡುಕುವ ಕೆಲಸ ಶಿಕ್ಷಕರು ನಿರ್ವಹಿಸುತ್ತಾರೆ ಅಂತ ಸಾಮರ್ಥ್ಯವನ್ನು ಇವತ್ತು ವಿಜ್ಞಾನದ ಪ್ರಯೋಗಾತ್ಮಕ ಮಾದರಿಗಳಲ್ಲಿ ನಾವು ನೋಡುತ್ತೇವೆ ಪ್ರತಿಯೊಬ್ಬ ಪೋಷಕರು ಇಲ್ಲದೆ ಯಾವ ಕಾರ್ಯವು ಯಶಸ್ವಿಯಾಗಲು ಸಾಧ್ಯವಿಲ್ಲ ಈ ಕಾರ್ಯಕ್ರಮ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಶುಭಾಶಯಗಳು ತಿಳಿಸಿದರು.
ಶಾಲಾ ಸಮಿತಿಯ ಸದಸ್ಯರಾದ ಚಂದ್ರಕಾಂತ ದೇಸಾಯಿ ಮತ್ತು ಶ್ರೀ ಸುರೇಶ್ ತಲಗಾರು, ಮುಖ್ಯಶಿಕ್ಷಕರು ಸಹ ಶಿಕ್ಷಕರು ಶಾಲಾ ಸಿಬ್ಬಂದಿ ಉಪಸ್ಥಿತಿ ಇದ್ದರು
